ವಿಟ್ಲ: ಮದುಮಗ ಕೊರಗಜ್ಜನ ವೇಷಧರಿಸಿ ಕುಣಿದ ವಿಚಾರಕ್ಕೆ ಸಂಬಂಧಿಸಿ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿ.ಎಚ್ ಪಿ ಕಾರ್ಯಕರ್ತರು ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ಸಂಜೆ ಸಾಲೆತ್ತೂರಿನಲ್ಲಿ ನಡೆದಿದೆ.
ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಯತ್ತ ಬಂದ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಎರಡು ಕೋಮಿನ ಜನ ಸೇರಿದ್ದು, ಪೊಲೀಸರು ಜನರನ್ನು ಚದುರಿಸಿ ಹತೋಟಿಗೆ ತಂದಿದ್ದಾರೆ.
ನಿನ್ನೆ ದಿನ ರಾತ್ರಿ ಮುಸ್ಲಿಂಮರ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಗೆಳೆಯರ ಬಳಗದೊಂದಿಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದರು ಎಲ್ಲಾ ಕಡೆಯು ಈ ಒಂದು ದಿನದಂದು ಮದು ಮಗನನ್ನು ಒಂದಷ್ಟು ಸತಾಯಿಸಿ ಹೆಣ್ಣಿನ ಮನೆಯಲ್ಲಿ ಬಿಟ್ಟು ಹೋಗುವುದು ಈಗೀಗ ರೂಡಿಯಾಗಿದ್ದು ನಿನ್ನೆ ಈ ಕೃತ್ಯ ಮೀತಿ ಮೀರಿತ್ತು ಎಂದು ವೀಡಿಯೋ ನೋಡಿದಾಗ ತೋಚುತ್ತಿದೆ. ನಿನ್ನೆಯ ದಿನ ಮದುಮಗನನ್ನು ಈತನ ಗೆಳೆಯರು ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡು ವರನನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.
ವರ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಆರೋಪಿಸಿ ಮುತ್ತಿಗೆ ಹಾಕಿದ್ದಾರೆ.