dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು : ಎಲ್ಲಾ ಕಲೆಗಳ ಸಮ್ಮಿಲನವನ್ನು ಹೊಂದಿರುವ ವಿಶೇಷವಾದ ಕಲೆ ನಾಟಕ ಕಲೆ. ಗ್ರಾಮಾಂತರ ಪ್ರದೇಶಗಳಿಗೂ ಹವ್ಯಾಸಿ ನಾಟಕ ಕಲೆಯನ್ನು ಪಸರಿಸುವ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಸ್ವಾಗತಾರ್ಹ ಎಂದು ಖ್ಯಾತ ಕವಿ ಲಕ್ಷ್ಮಣ್‌ ರಾವ್‌ ಹೇಳಿದರು.



ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಆಯೋಜಿಸಿದ್ದ ಆಷಾಢದ ಒಂದು ದಿನ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಕಲೆಗಳನ್ನು ಮಿಳಿತಗೊಂಡಂತಹ ನಾಟಕ ಕಲೆ ಬಹಳ ಪ್ರಮುಖವಾದದ್ದು. ಕವಿಯಾಗಿ ನಾನು ಪ್ರಸಿದ್ದಿಯಾಗಿದ್ದರೂ ಒಂದೆರಡು ನಾಟಕಗಳನ್ನು ಕೂಡಾ ರಚಿಸಿದ್ದೇನೆ. ಕಾಳಿದಾಸನ ನಾಟಕದ ಮೇಲೆ ಆಧಾರಿತವಾಗಿರುವ ಈ ಪ್ರಸಿದ್ದ ನಾಟಕವನ್ನು ಈ ಕಲಾತಂಡ ಬೆಂಗಳೂರಿನಲ್ಲಿ ಪ್ರದರ್ಶನಗೊಳಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹವ್ಯಾಸಿ ನಾಟಕ ರಂಗವನ್ನು ಪ್ರಚುರ ಪಡಿಸುವಲ್ಲಿ ಐಶ್ವರ್ಯ ಕಲಾನಿಕೇತನ ಪ್ರಮುಖ ಪಾತ್ರವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದರು.

ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ ಪಿ ಎಲ್‌ ವೆಂಕಟರಾಮರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಮುಂದೆ ಪ್ರತಿಬಾರಿಯೂ ಫಿಸಿಕಲ್‌ ಅದಂತಹ ಅಪಿರೆನ್ಸ್‌ ಬೇಡುವ ಕಲೆ ನಾಟಕ ಕಲೆ. ನಮ್ಮ ಭಾಗದ ಜನರಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡುವಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ವೃತ್ತಿ ರಂಗ ಕಲೆ ಇಂದು ಕ್ರಮೇನ ಕ್ಷೀಣಿಸುತ್ತಿದೆ. ಆದರೆ, ಇಂತಹ ಹವ್ಯಾಸಿ ರಂಗತಂಡಗಳು ಬೇಸಿಗೆ ಶಿಬಿರಗಳು ಹಾಗೂ ನಾಟಕ ಪ್ರದರ್ಶನದ ಮೂಲಕ ಗ್ರಾಮಾಂತರ ಪ್ರದೇಶಕ್ಕೆ ನಾಟಕ ಕಲೆಯನ್ನು ತಗೆದುಕೊಂಡು ಹೋಗುತ್ತಿರುವುದು ನಿಜವಾಗಿಯೂ ಮೆಚ್ಚುವಂತಹ ಸಾರ್ಥಕ ಕೆಲಸ ಎಂದು ಹೇಳಿದರು.

'; } else { echo "Sorry! You are Blocked from seeing the Ads"; } ?>



ಕಾರ್ಯಕ್ರಮದಲ್ಲಿ ಸಹನಾ ಸೋಮಶೇಖರ್‌ ನಿರ್ದೇಶನದ, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಅನುವಾದದ, ಜಿ.ವಿ ಪ್ರಸನ್ನ ಕುಮಾರ್‌ ನಿರ್ಮಾಣ ಮತ್ತು ನಿರ್ವಹಣೆ ಮಾಡಿದ, ಎಸ್‌ ಸೋಮಶೇಖರ್‌ ಅವರ ಸಂಚಾಲಕತ್ವದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಂದ ಆಷಾಢದ ಒಂದು ದಿನ ನಾಟಕವನ್ನು ಪ್ರದರ್ಶಿಸಲಾಯಿತು.



ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕರು ಹಾಗೂ ಉದ್ಯಮಿ ಜಿ. ಎನ್‌ ಮೂರ್ತಿ, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!