dtvkannada

ಪುತ್ತೂರು: ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಮತ್ತು ಅಂಗ ಸಂಸ್ಥೆಯಾದ ನವಚೇತನ್ ರಿಟಾಯರ್ಮೆಂಟ್ ಟೌನ್ ಶಿಪ್ ಶಾಂತಿಗೋಡು ಪುತ್ತೂರು ಇವರ ವತಿಯಿಂದ ಸಂಸ್ಥೆಯ ಸ್ಥಾಪಕರು ಮತ್ತು ಮ್ಯಾನಜಿಂಗ್ ಡೈರೆಕ್ಟರ್ ಆಗಿರುವ ಡಾ.ಶಾಮ್ ಭಟ್ ಮತ್ತು ಸುಶೀಲ ಶಾಮ ಭಟ್ ಅವರು ಪುತ್ತೂರು ತಾಲೂಕು ಸರಕಾರಿ ಅಸ್ಪತ್ರೆಗೆ 2 ನೇ ಬಾರಿ ರೂಪಾಯಿ. 8 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಅಂದರೆ ತಲಾ 60ಸಾವಿರ ಮೌಲ್ಯದ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.



ಸನ್ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರ ಮೂಲಕ ಡಾ.ಶ್ಯಾಮ್ ಭಟ್ ದಂಪತಿಗಳು ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ರವರು ಮಾತನಾಡಿ, ಜನರ ಸಹಭಾಗಿತ್ವದಿಂದ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವಾಸದ ಸೇವೆ
ಯೊಂದಿಗೆ ಕೋವಿಡ್ ಬಂದಾಗ ಜನರಿಗೆ ಆಸ್ಪತ್ರೆಯಲ್ಲಿ ಸರಕಾರಿ ಆಸ್ಪತ್ರೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕೊಡುವ ಕೆಲಸ ಆಗುತ್ತಿದೆ ಎಂದರಲ್ಲದೆ, ದಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಉತ್ತಮ ವಿಶ್ವಾಸದ ಸೇವೆಗೆ ಆಸ್ಪತ್ರೆ ಇವತ್ತು ಬದ್ದವಾಗಿದೆ. ಇದರ ಜೊತೆಗೆ ಡಾ. ಶ್ಯಾಮ್ ಭಟ್ ಅವರಿಂದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯು ಆಸ್ಪತ್ರೆಗೆ ಪ್ರಾಣ ಕೊಡುವ ಸಂಗತಿ ಆಗಿದೆ ಎಂದರು.



ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಮತ್ತು ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಆಸ್ಪತ್ರೆಯ ಪರವಾಗಿ ಪಡೆದು ಪಡೆದು ರೋಗಿಗಳಿಗೆ ಇದರ ಸದುಪಯೋಗ ನೀಡಲಾಗುವುದೆಂದು ತಿಳಿಸಿದರು.

ಭಟ್ ಬಯೋಟೆಕ್ ನ ಡಾ ಶ್ಯಾಮ್ ಭಟ್ ಮಾತನಾಡಿ ತವರು ಜಿಲ್ಲೆಯ ಜನತೆಗೆ ಪುತ್ತೂರಿನಲ್ಲಿ ನವಚೇತನ ಹೆಸರಿನಲ್ಲಿ ಶಾಂತಿಗೋಡಿನಲ್ಲಿ ಬಡವಾಣೆಯೊಂದನ್ನು ನಿರ್ಮಿಸಿ ಹಿರಿಯರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಿದ್ದೆವೆ. ಈ ನಡುವೆ ಕೋವಿಡ್ ಸಂದರ್ಭದಲ್ಲಿ ೨ ನೇ ಅಲೆಯ ಬಳಿಕ ೩ ನೇ ಅಲೆಯ ಜಾಗ್ರತೆಗಾಗಿ ಆರೋಗ್ಯದ ಸುರಕ್ಷತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ನೆರವು ನೀಡಬೇಕೆಂದು ಈಗಾಗಲೇ 5 ಆಕ್ಸಿಜನ್ ಕ್ಕಾನ್ಸೆಂಟ್ರೇಟರ ಅನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ನೀಡಿದ್ದು ಹೆಚ್ಚುವರಿಯಾಗಿ 14 ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆಯಾಗಿ ನೀಡಿದ್ದೇವೆ ಎಂದರು.



ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಫೀಕ್ ದರ್ಬೆ, ಕೃಷ್ಣ ನಾಯ್ಕ್ ಪಿ ಎಮ್ ,ನವಚೇತನದ ಮ್ಯಾನೇಜರ್ ಆದಂತಹ ಗೋಪಾಲಕೃಷ್ಣ .ಕೆ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!