dtvkannada

'; } else { echo "Sorry! You are Blocked from seeing the Ads"; } ?>

ಕೊಣಾಜೆ ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿದ್ದಾರೆ. ಈಕೆ ಮಮತಾ ಶೈನಿ ಡಿಸೋಜ ಎಂಬವರಿಗೆ ರೂ.3 ಲಕ್ಷ ಅಂದಾಜು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ.



2020 ರ ಜ.6 ರಂದು ಪ್ರಕರಣ ಈ ಸಂಬಂಧ ಕೇಸು ದಾಖಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ಒಂಭತ್ತು ಬಾರಿ ವಾದ ವಿವಾದಗಳು ನಡೆದಿದ್ಜವು. ಇದೀಗ ನ್ಯಾಯಾಲಯ ಬಂಧನದ ಆದೇಶ ಹೊರಡಿಸಿದ್ದು, ಅಧ್ಯಕ್ಷೆ ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಕೊಣಾಜೆ ಠಾಣಾ ಪೊಲೀಸರು ಶೋಧ ನಡೆಸಿದ್ದಾರೆ. ಆರೋಪಿತೆ ಚಂಚಲಾಕ್ಷಿ ಕೊಣಾಜೆ ಗ್ರಾಮದ ಪ್ರಥಮ ಪ್ರಜೆಯಾಗಿದ್ದು, ಆದರೆ ಇದೀಗ ಅಪರಾಧ ಪ್ರಕರಣದಲ್ಲಿ ಒಳಪಟ್ಟಿರುವುದರಿಂದ ಕೂಡಲೇ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.

ಜವವರಿ 1, 2019 ರಲ್ಲಿ ಮನೆಯಲ್ಲಿ ಕಷ್ಟ ಇದೆ, ಬ್ಯಾಂಕ್ ಸಾಲ ತೀರಿಸಲಾಗುತ್ತಿಲ್ಲ, ಮನೆ ಹರಾಜಿಗೆ ಬಂದಿದೆ, ಪತಿ ವಿದೇಶಕ್ಕೆ ಹೋಗುತ್ತಾರೆ. ಅದಕ್ಕಾಗಿ ಸಹಾಯ ಮಾಡಿ ಅಂದಿದ್ದರು. ಒಂದೇ ಪಕ್ಷದವಳು ಹಾಗೂ ಗೆಳತಿಯಾಗಿರುವುದರಿಂದ ಮೊದಲಿಗೆ ರೂ.2.5 ಲಕ್ಷ ನೀಡಿ ಬಳಿಕ ಮತ್ತೆ ರೂ. 50,000 ನೀಡಿದ್ದೆನು.

ಕರಾರುಪತ್ರದಲ್ಲಿ ಮೂರು ತಿಂಗಳೊಳಗೆ ಹಣವನ್ನು ವಾಪಸ್ಸು ನೀಡುವುದಾಗಿ ಒಪ್ಪಿಕೊಂಡಂತೆ ರೂ. 3 ಲಕ್ಷದ ಚೆಕ್ ಅನ್ನು ಪಡೆದುಕೊಂಡಿದ್ದೆನು. ಆದರೆ ಮೂರು ತಿಂಗಳಾದರೂ ಹಣ ನೀಡದೇ ಸತಾಯಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದೆನು.

ಅಲ್ಲಿ ಎರಡು ಬಾರಿ ವಿಚಾರಣೆಗೆ ಹಾಜರಾದರೂ ಆನಂತರ ನಡೆದು ಐದು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.

ಜ.7 ರಂದು ಬಂಧನದ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರು ಆರೋಪಿತೆಯನ್ನು ಹಿಡಿದಿರಲಿಲ್ಲ. ಅದಕ್ಕಾಗಿ ಉಳ್ಳಾಲ ನಿವಾಸಿ ಮಮತಾ ಶೈನಿ ಡಿಸೋಜ ಅವರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಬಳಿಕ ಕೊಣಾಜೆ ಪೊಲೀಸರ ಜೊತೆಗೆ ಶೈನಿಯವರು ಆಕೆಯ ಮನೆಗೆ, ಪಂಚಾಯಿತಿಗೆ ತೆರಳಿದ್ದರೂ ಆಕೆ ಪತ್ತೆಯಾಗಲಿಲ್ಲ.

ಮನೆಗೆ ಬೀಗ ಹಾಕಲಾಗಿತ್ತು, ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಾನು ಪೊಲೀಸ್ ಠಾಣೆಗೆ ಎರಡು ದಿನಗಳಿಂದ ಅಲೆದಾಡುತ್ತಿದ್ದೇನೆ ‘ ಎಂದು ಮಮತಾ ಶೈನಿ ಡಿಸೋಜ ಮಾಧ್ಯಮಕ್ಕೆ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!