dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದು, ಶುಕ್ರವಾರ ದಾಖಲೆಯ 639 ಮಂದಿಗೆ ಕೊರೊನಾ ದೃಢಪಟ್ಟಿದೆ.

ಜಿಲ್ಲೆಯಲ್ಲಿ 299 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 2,990 ಸಕ್ರಿಯ ಪ್ರಕರಣಗಳಿವೆ. ಶೇ.5.52 ರಷ್ಟು ಪಾಸಿಟಿವಿಟಿ ದರ ಇದೆ. ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 13 ಪ್ರಕರಣ ಪತ್ತೆಯಾಗಿದ್ದು, ಆ ಪ್ರದೇಶವನ್ನು ಕ್ಲಸ್ಟರ್‌ ವಲಯವೆಂದು ಘೋಷಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ಈ ಬಗ್ಗೆ ಪ್ರತಿಕ್ರಯಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ, ನಾಲ್ಕು ವಾರಗಳ ಹಿಂದೆ ಶೇ. 0.25 ಇದ್ದ ಪಾಸಿಟಿವಿಟಿ ದರ ಇದೀಗ ಶೇ. 2.5 ಮೀರಿದೆ. ದಿನಕ್ಕೆ 10ರಿಂದ 15ರ ವರೆಗೆ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿದೆ. ಸಕ್ರಿಯ ಪ್ರಕರಣಗಳು 2,000 ತಲುಪಿವೆ. ಇದೇವೇಳೆ ಕೊರೊನಾ ಪರೀಕ್ಷೆಗಳ ಸಂಖ್ಯೆಯೂ ಜಾಸ್ತಿಯಾಗಿದೆ. 15 ದಿನಗಳ ಹಿಂದೆ ದಿನಕ್ಕೆ 6ರಿಂದ 7 ಸಾವಿರ ಪರೀಕ್ಷೆ ಗಳನ್ನು ಮಾಡುತ್ತಿದ್ದರೆ ಒಂದು ವಾರ ದಿಂದ ದಿನಕ್ಕೆ ಸರಾಸರಿ 10,000 ಮಾಡಲಾಗುತ್ತಿದೆ. ಸೋಂಕಿನ ತೀವ್ರತೆ ಲಸಿಕೆ ಪಡೆದವರಲ್ಲಿ ಬಹಳಷ್ಟು ಕಡಿಮೆ ಇದ್ದು ಆಸ್ಪತ್ರೆಗೂ ದಾಖಲಾಗುತ್ತಿರುವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿದೆ. ವೆನ್ಲಾಕ್‌ ನಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾಗಿರುವ 280 ಬೆಡ್‌ಗಳಲ್ಲಿ 13 ರೋಗಿಗಳು ಮಾತ್ರ ದಾಖಲಾಗಿದ್ದು ಅವರಲ್ಲಿ ಮೂವರು ಐಸಿಯು ಬೆಡ್‌ನ‌ಲ್ಲಿದ್ದಾರೆ. ಅವರೆಲ್ಲರೂ ಹೊರ ಜಿಲ್ಲೆಯವರು. ಒಂದು 1 ವಾರದಲ್ಲಿ 2 ಸಾವು ಸಂಭವಿಸಿದ್ದು ಇಬ್ಬರೂ ಇತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಲಸಿಕೆ ಪಡೆದುಕೊಂಡಿರಲಿಲ್ಲ ಎಂದರು.

ಹೊರರಾಜ್ಯಗಳಿಂದ ಬರುವವರ ಮೇಲೆ ನಿಗಾ:
ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳ, ಮಹಾರಾಷ್ಟ್ರ, ಗೋವಾದಿಂದ ಬರುವವರು 72 ತಾಸುಗಳೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ದೃಢ ಪತ್ರ ಹೊಂದಿರಬೇಕು. ಗಡಿಯಲ್ಲಿ ದಿನಂಪ್ರತಿ ಸಂಚ ರಿಸುವ ವಿದ್ಯಾರ್ಥಿಗಳು ಹಾಗೂ ಇತರರಿಗೆ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿ ನೆಗೆಟಿವ್‌ ದೃಢಪತ್ರ ಹೊಂದಿರಬೇಕು. ಸ್ವಾಬ್‌ ಸಂಗ್ರಹಕ್ಕೂ ಗಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ 17 ಗಡಿಗಳಲ್ಲಿ ಚೆಕ್‌ಪಾಯಿಂಟ್‌ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

'; } else { echo "Sorry! You are Blocked from seeing the Ads"; } ?>

ಶಾಲೆಗಳಲ್ಲಿ ಮುನ್ನಚ್ಚರಿಕೆ:
ಬುಧವಾರದ ವರೆಗಿನ ವರದಿ ಪ್ರಕಾರ 12 ದಿನಗಳಲ್ಲಿ ಜಿಲ್ಲೆಯಲ್ಲಿ 5ರಿಂದ 15ವರ್ಷದೊಳಗಿನ 25,000 ಮಕ್ಕಳನ್ನು ಪರೀಕ್ಷೆ ಮಾಡಲಾಗಿದೆ. 112 ಮಕ್ಕಳಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಎಲ್ಲರಲ್ಲೂ ಲಘು ಲಕ್ಷಣಗಳಷ್ಟೇ ಇವೆ. ಯಾವ ಶಾಲೆಯಲ್ಲಿ ಸೋಂಕು ಕಂಡುಬರುತ್ತದೋ ಆ ಶಾಲೆಯನ್ನು ಒಂದು ಯೂನಿಟ್‌ ಆಗಿ ಮಾಡಿ ಮುಚ್ಚಲಾಗುವುದು.

ಜಿಲ್ಲೆಯಲ್ಲಿ ಸುಮಾರು 90,000 ಮಂದಿ ಮೊದಲ ಡೋಸ್‌ ಲಸಿಕೆಯನ್ನೇ ಪಡೆದಿಲ್ಲ. ಅವರೆಲ್ಲರೂ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸಹಕರಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಮನವಿ ಮಾಡಿಕೊಂಡರು.

ಕೇರಳದಲ್ಲಿ 16,338 ಪ್ರಕರಣ:
ಕೇರಳದಲ್ಲಿ ಶುಕ್ರವಾರ 16,338 ಮಂದಿಗೆ ಕೊರೊನಾ ದೃಢಪಟ್ಟಿದೆ. 3,848 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 50,568ಕ್ಕೇರಿದೆ. 76819 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

9ನೇ ತರಗತಿ ವರೆಗೆ ಶಾಲೆ ಬಂದ್‌:
ಕೋವಿಡ್‌ ವ್ಯಾಪಿಸುತ್ತಿರುವುದರಿಂದ ಕೇರಳದಲ್ಲಿ ಒಂದರಿಂದ 9ರ ವರೆಗಿನ ತರಗತಿಗಳನ್ನುಜ. 21ರಿಂದ ಎರಡು ವಾರಗಳ ಕಾಲ ಮುಚ್ಚಿಆನ್‌ಲೈನ್‌ ತರಗತಿ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!