ಶಿರಸಿ: ಮೂವರು ವಿಧ್ಯಾರ್ಥಿ ಸ್ನೇಹಿತರು ಸೇರಿ ಪೋಟೋ ಶೂಟ್ ನಡೆಸಲು ಫಾಲ್ಸ್‌ಗೆ ಹೋದ ವಿದ್ಯಾರ್ಥಿಗಳಲ್ಲಿ ಓರ್ವ ನೀರುಪಾಲದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗಾ ಪಾಲ್ಸ್‌ನಲ್ಲಿ ನಡೆದಿದೆ.

ಶಿರಸಿಯ ಸುಬ್ರಹ್ಮಣ್ಯ ವಿನಾಯಕ ಹೆಗಡೆ (17) ಎಂಬಾತನೇ ನೀರು ಪಾಲಾದ ವಿದ್ಯಾರ್ಥಿಯಾಗಿದ್ದಾನೆಂದು ತಿಳಿದು ಬಂದಿದೆ.
ಶಿರಸಿ ಸರಕಾರಿ ಪದವಿ ಕಾಲೇಜಿನಲ್ಲಿ ಕಾಮರ್ಸ್ ಓದುತ್ತಿದ್ದ ಸುಬ್ರಹ್ಮಣ್ಯ ಮೂವರು ಸ್ನೇಹಿತರು ಸೇರಿ ಪೋಟೋ ಶೂಟ್‌ಗೆ ಶಿವಗಂಗಾ ಫಾಲ್ಸ್‌ಗೆ ಹೋಗಿದ್ದರು.
ಕಲ್ಲು ಬಂಡೆಯ ನಡುವೆ ಫೋಟೋ ತೆಗೆಯುತ್ತಿರುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವಿಗೆ ಈಡಾಗಿದ್ದಾನೆ.
ವಿದ್ಯಾರ್ಥಿ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಮತ್ತು ಈಜುಗಾರರಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಸಿ.ಪಿ.ಐ. ರಾಮಚಂದ್ರ ನಾಯಕ ಹಾಗೂ ಪಿ.ಎಸ್.ಐ. ಈರಯ್ಯ ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.