ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದ್ದು ಇದೀಗ ವಿದ್ಯಾರ್ಥಿ ಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ದ.ಕನ್ನಡ ಜಿಲ್ಲೆಯ ವಿವಿಧ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈಗ ಒಂದು ವಾರದ ಮಟ್ಟಿಗೆ ಶಾಲೆಗಳನ್ನು ಬಂದ್ ಮಾಡಲಾಗಿದ್ದು ಐದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಡಿಸಿ ಸೂಚನೆಯಂತೆ ಶಾಲೆಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಂದ್ ಮಾಡಿದಂತಹ ಶಾಲೆಗಳ ವಿವರ:
ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಎಡಪದವಿನ ವಿವೇಕಾನಂದ ಪಿಯು ಕಾಲೇಜು, ಬೆಂಗ್ರೆ ಕಸಬಾದ ಸರಕಾರಿ ಪ್ರೌಢ ಶಾಲೆ, ಡೊಂಗರಕೇರಿಯ ಕೆನರಾ ಸಿಬಿಎಸ್ಇ ಶಾಲೆ,ಮುಲ್ಕಿಯ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮುಚ್ಚೂರಿನ ಸರಕಾರಿ ಪ್ರೌಢ ಶಾಲೆಯನ್ನು ಬಂದ್ ಮಾಡಲು ಆದೇಶಿಸಲಾಗಿದೆಯೆಂದು ತಿಳಿದು ಬಂದಿದೆ.