ಉಪ್ಪಿನಂಗಡಿ : ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಯಾರೋ ಕಳ್ಳರು ಜನವರಿ 11ರ ರಾತ್ರಿ ಸಮಯ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಬಡಾವು ಮನೆ ನಿವಾಸಿ ವಿನಯ ಕುಮಾರ್(36) ಹಾಗೂ ಕೆಮ್ಮಾಯಿ ಜಂಕ್ಷನ್ ನಿವಾಸಿ ಜುನೈದ್(24) ಬಂಧಿತ ಆರೋಪಿಗಳಾಗಿದ್ದಾರೆ.
ಬಿಳಿಯೂರು ಗ್ರಾಮದ ವಸಂತ ದೇವಾಡಿಗರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಜನವರಿ 11ರಂದು ರಾತ್ರಿ ಕಳ್ಳತನವಾಗಿತ್ತು.
ಈ ಕುರಿತು ಮನೆಯ ಮಾಲಿಕ ವಸಂತ್ ದೇವಾಡಿಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರು.
ತನಿಖೆ ನಡೆಸಿದ ಪೊಲೀಸರು ಜನವರಿ 18ರಂದು 34ನೇ ನೆಕ್ಕಿಲಾಡಿ ಜಂಕ್ಷನ್ ಬಳಿ ಆರೋಪಿಗಳನ್ನು ಬಂಧಿಸಿ, ಅಟೋ ರಿಕ್ಷಾ ಹಾಗೂ ಕಳವು ಮಾಡಿದ ಅಡಿಕೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಪುತ್ತೂರು ಮೂಲದವರೆಂದು ಗುರುತಿಸಲಾಗಿದೆ.
ಬಂಧಿತರಿಗೆ ಜಾಮೀನು ಮಂಜೂರು: ಅಡಿಕೆ ಕಳ್ಳತನ ಪ್ರಕರಣ ಸಂಬಂಧಿಸಿ ಬಂಧಿತ ಕಳ್ಳರಿಗೆ ನ್ಯಾಯಾಲಯವು ಒಂದೇ ದಿನದಲ್ಲಿ ಮಧ್ಯಂತರ ಜಾಮೀವು ಮಂಜೂರು ಮಾಡಿದೆ.
ಜುನೈದ್ ಪರ ವಕೀಲರಾಗ ಮಹೇಶ್ ಕಜೆ ಹಾಗೂ ವಿನಯ್ ಪರ ಚಿನ್ಮಯ್ ರೈ ವಾದಿಸಿದ್ದರು.