ನರಗುಂದ: ಸಂಘ ಪರಿವಾರದ ಕುಕೃತ್ಯಕ್ಕೆ ಬಲಿಯಾದ ಅಮಾಯಕ ಶಮೀರ್ ಶಹಪೂರ ರವರ ಮನೆಗೆ SSF ರಾಜ್ಯ ಸಮಿತಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು.

ಪ್ರೀತಿ ಸೌಹಾರ್ದತೆಯಿಂದ ಬಾಳುವ ನರಗುಂದ ನಾಡಿಗೆ ಕೋಮು ಕ್ರಿಮಿಗಳು ಕಾಲಿಟ್ಟಿದ್ದು ಕೇದಕರವಾಗಿದ್ದು ಸೌಹಾರ್ದತೆಯ ನಾಡಿಗೆ ಕೋಮು ರಕ್ಕಸರ ಹದ್ದಿನ ಕಣ್ಣು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಮಾಯಕ ಯುವಕರನ್ನು ಗುಂಪುಸೇರಿ ಹತ್ಯೆ ಮಾಡುವುದು ಧೀರತೆಯಲ್ಲ, ಅದು ಹೇಡಿತನ.
ಅದಕ್ಕೆ ಪ್ರತ್ಯುತ್ತರ ನೀಡಲು ನಮಗೆ ತಿಳಿದಿದೆ ಆದರೆ
ಜೀವಕ್ಕೆ ಬದಲಾಗಿ ಜೀವ ತೆಗೆಯುವುದು ಇಸ್ಲಾಮಿನ ಸಂಸ್ಕೃತಿಯಲ್ಲ.
ಆದ್ದರಿಂದ ನಾವು ಅಷ್ಟು ಕೀಳ್ಮಟ್ಟಕ್ಕೆ ಇಳಿಯಲ್ಲ
ಈ ಘಟನೆಯನ್ನು ಸಂಪೂರ್ಣವಾಗಿ SSF ಖಂಡಿಸುತ್ತದೆ ಎಂದು SSF ಕರ್ನಾಟಕ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ ಹೇಳಿದರು.
ಮನುಷ್ಯತ್ವ ಇಲ್ಲದ ನರಹಂತಕರಿಂದ ಇಂತಹ ಕೃತ್ಯಗಳು ಮಾತ್ರವೇ ಸಾಧ್ಯ,
ಪ್ರೀತಿ,ಸೌಹಾರ್ದತೆಯ ನಾಡಿನಲ್ಲಿ ಇದೀಗ ಕೋಮುವಾದಿಗಳ ಕರಿ ನೆರಳು ಬಿದ್ದಿದೆ ಎಂದು ಅವರು ಆಶಂಕೆ ವ್ಯಕ್ತಪಡಿಸಿದರು.
SSF ರಾಜ್ಯ ಮತ್ತು ಸ್ಥಳೀಯ ನಾಯಕರು ನಿಯೋಗದಲ್ಲಿದ್ದರು.