ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಳ್ಳಾರೆ ಮೂಲದ ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿಯ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಬಳಿಕ ನಾಪತ್ತೆಯಾಗಿದ್ದ ಪ್ರಕರಣ ಇಂದು ಮಹಿಳೆ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ.
ಮಹಿಳೆ ಮೈಸೂರಲ್ಲಿರುವ ಸ್ಥಳವನ್ನು ಪತ್ತೆ ಹಚ್ಚಿದ ಉರ್ವ ಠಾಣೆಯ ಪೊಲೀಸರು ಇದೀಗ ಮಂಗಳೂರಿಗೆ ಕರೆತಂದು ಪೋಷಕರ ಜೊತೆ ಕಳುಹಿಸಿಕೊಡವುದರ ಮೂಲಕ ಮನೆಯವರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಎರಡು ದಿನದ ಹಿಂದೆ ಬೆಳ್ಳಾರೆ ಕಲ್ಮಡ್ಕದ ನಿವಾಸಿಯಾದ ದಿವ್ಯ ಎನ್ನುವ ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿ ಬ್ಯಾಂಕ್ ಗೆ ತೆರಳುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದರು.ಕೂಡಲೇ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾರವರ ಫೋಟೋ ಹರಿಯಬಿಟ್ಟು ಪತ್ತೆ ಹಚ್ಚುವಂತೆ ಸಹಾಯ ಕೇಳಿಕೊಂಡಿದ್ದರು.ಅದೇ ರೀತಿ ವ್ಯಾಪಾಕವಾಗಿ ಇದು ವೈರಲ್ ಕೂಡ ಆಗಿತ್ತು.
ಈ ಬಗ್ಗೆ ಮಹಿಳೆಯ ಸಹೋದರಿ ನೀಡಿದ ದೂರಿನಂತೆ ಉರ್ವ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅದರಂತೆ ಮಹಿಳೆಯನ್ನು ಮೈಸೂರಿನಲ್ಲಿ ಪತ್ತೆ ಹಚ್ಚಲಾಗಿದ್ದು,ಆದರೆ ಈ ಮಹಿಳೆ ಯಾಕಾಗಿ ಮೈಸೂರು ಹೋಗಿದ್ದು ಎಲ್ಲಿಗೆ ಹೋಗಿದ್ದೆಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ..! ಮಂಗಳೂರು ಪೊಲೀಸರು ಮಹಿಳೆಯನ್ನು ಕರೆತಂದು ಪೋಷಕರೊಂದಿಗೆ ಕಳುಹಿಸಿ ಕೊಡುವುದರ ಮೂಲಕ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.