ಮಂಗಳೂರು: ನಾರಾಯಣ ಗುರುಗಳ ಸಂದೇಶದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದನ್ನು ಖಂಡಿಸಿ,
ಕೂಡಲೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ʼಗೆ ಸಮಿತಿಯು ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿ ಯುವ ಜನತಾ ದಳ ಮಂಗಳೂರು ಸ್ಟೇಟ್ ಬ್ಯಾಂಕ್ ವ್ರತ್ತದಿಂದ GHS ರೋಡ್ ಕುದ್ರೋಳಿ ಗೋಕರ್ಣ ಕ್ಷೇತ್ರದ ವರೆಗೆ ವಾಹನ ಜಾಥಾ ಹಮ್ಮಿಕೊಳ್ಳಾಲಾಯಿತು.
ಈ ಸಂದರ್ಭದಲ್ಲಿ ವಾಹನ ಜಾಥಾ ಚಾಲನೆ ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರೂ ಹಾಗೂ ಸರಕಾರಿ ಭರವಸೆ ಸಮಿತಿ ಅಧ್ಯಕ್ಷರೂ ಆಗಿರುವ ಬಿ.ಎಮ್ ಫಾರೂಕ್ ರವರು ಮಾತನಾಡಿ ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ.
ಕೂಡಲೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ʼಗೆ ಸಮಿತಿಯು ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿದರು ಹಾಗೂ ಬಿಜೇಪಿಯೇತರ ಸರಕಾರ ಇರುವ ರಾಜ್ಯಗಳಲ್ಲಿ ಅವರ ರಾಜ್ಯದಿಂದ ಪ್ರತಿನಿಧಿಸುವ ಟ್ಯಬ್ಲೋಗಳನ್ನು ತಿರಸ್ಕರಿಸುವ ಮುಖಾಂತರ ಮತ ವಿಭಜನೆ ಆಗುಬೇಕು ಎಂದು ಪ್ರಯತ್ನಿಸಿದರೆ ಕರ್ನಾಟಕ ರಾಜ್ಯದಲ್ಲಿ ನಾರಾಯಣ ಗುರುಗಳ ಆರಾಧಕರು ಇದ್ದರೂ ಇದರೆ ಬಗ್ಗೆ ಮಾತನಾಡುತ್ತಿಲ್ಲ ದುರಂತ ಎಂದು ಹೇಳಿದರು.
ಕಾರ್ಯಕ್ರಮದ ನೇತ್ರತ್ವ ವಹಿಸಿ ಹಾಗೂ ಕಾರ್ಯಕ್ರಮದ ರುವಾರಿಯೂ ಯುವ ಜನತಾದಳದ ಜಿಲ್ಲಾಧ್ಯಕ್ಷರಾಗಿರುವ ಅಕ್ಷಿತ್ ಸುವರ್ಣ ಮಾತನಾಡಿ ಇದು ಹಿಂದುಳಿದ ಸಮುದಾಯಕ್ಕೆ ಮಾಡಿದ ಅನ್ಯಾಯವಲ್ಲ ಬದಲಾಗಿ ಈ ನಾಡಿಗೆ ಮಾಡಿದ ಅನ್ಯಾಯವಾಗಿದೆ. ಇದೇ ಗಣರಾಜ್ಯದ ದಿನದಂದು ಗುರುಗಳ ಸ್ಥಬ್ದ ಚಿತ್ರ ಹಾಕಲೇಬೇಕು ಎಂದು ಒತ್ತಾಯಿಸಿ ಹಾಗೂ ಮುಂದಿನ ದಿನಗಳಲ್ಲಿ ಕುಮಾರಣ್ಣ ನ ಅಧಿಕಾರ ಬಂದ ಕೂಡಲೇ ರಾಜ್ಯದಿಂದ ನಾರಯಣ ಗುರುಗಳ ಸ್ಥಭ್ದ ಚಿತ್ರವನ್ನು ಗಣರಾಜ್ಯ ದಿನದಂದು ರಾಜ್ಯದ ಪ್ರತಿನಿಧಿಸುವ ಟ್ಯಬ್ಲೋವಾಗಿ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಜನತಾ ದಳದ ಜಿಲ್ಲಾಧ್ಯಕ್ಷರಾಗಿರುವ ಜಾಕೆ ಮಾದೆಗೌಡ ಇವರು ಸ್ವಾವಲಂಬಿಗಳಾಗಿ ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಎಲ್ಲಾ ಜಾತಿ ಧರ್ಮ ಕುಲ ವನ್ನು ಪ್ರತಿಪಾದಿಸುತ್ತಿರುವ ಗುರು ನಾರಾಯಣ ಗುರುಗಳ ತತ್ವವನ್ನು ಜೆಡಿಎಸ್ ಪಕ್ಷ ಅನುಸರಿಸುತ್ತಿದೆ ಎಂದು ಹೇಳಿದರು.
ಜೆಡಿಎಸ್ ಮಹಿಳಾ ಘಟಕದ ಸುಮತಿ ಹೆಗ್ಡೆ ಮಾತನಾಡಿ ಧನ್ಯವಾದ ಸಮರ್ಪಿಸಿದರು. ಜೆಡಿಎಸ್ ರಾಜ್ಯ ಯುವ ನಾಯಕ ಫೈಝಲ್ ರಹ್ಮಾನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯ ರಾಜ್ಯನಾಯಕರಾದ ಇಕ್ಬಾಲ್ ಮುಲ್ಕಿ, ಹಾರೂನ್ ರಶೀದ್ ಬಂಟ್ವಾಳ ಯುವ ಮುಖಂಡರಾದ ರತೀಶ್ ಕರ್ಕೇರ, ಮೊಹಮ್ಮದ್ ಆಸಿಫ್, ಮೊಹಮ್ಮದ್ ಫೈಝಲ್, ಹಿತೇಷ್ ರೈ, ಸತ್ತಾರ್ ಬಂದರ್, ಸವಾಝ್ ಬಂಟ್ವಾಳ, ರಾಶ್ ಬ್ಯಾರಿ, ನಝಿರ್ ಖಂದಕ್, ಸುಮಿತ್ ಸುವರ್ಣ, ಲಿಖಿತ್ ರಾಜ್, ಮಾಸ್ ಆಸಿಫ್ ಇಕ್ಬಾಲ್, ಅಲ್ತಾಫ್ ತುಂಬೆ, ಮೋಹನ್ ಕೊಲ್ಲಮೊಗ್ರ,ಪ್ರದೀಪ್ ,ಬಿಲಾಲ್, ತಮೀಮ್, ನುಹೈನ್ ,ಲತೀಫ್ ವಳಚ್ಚಿಲ್, ಕನಕದಾಸ್, ಜಾಫರ್, ಫ್ರಾನ್ಸಿಸ್, ಮೊಹಮ್ಮದ್ ಬೆಂಗ್ರೆ ಉಪಸ್ಥಿತರಿದ್ದರು.