';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಸಂಪಾಜೆ ಗೇಟಿನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ಇಂದು ನಡೆದಿದೆ.
ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಇದು ದನದ ಫುಡ್ ಸಾಗಾಟ ಎಂದು ಚಾಲಕ ಹೇಳಿದ್ದಾನೆ.
ಆದರೂ ಅನುಮಾನಗೊಂಡ ಗೇಟಿನ ಸಿಬ್ಬಂದಿ ಲಾರಿಯ ಒಳಗೆ ಇಣುಕಿ ನೋಡಿದಾಗ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಇದ್ದವು. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ತನಿಖೆ ನಡೆಯುತ್ತಿದೆಯೆಂದು ತಿಳಿದು ಬಂದಿದೆ.