dtvkannada

'; } else { echo "Sorry! You are Blocked from seeing the Ads"; } ?>

ವ್ಯಾಯಾಮ ಮಾಡಿದ್ದು ಸಾಕು, ನಿಲ್ಲಿಸು ಎಂದು ಹೇಳಿದ ತಾಯಿಯನ್ನು ಡಂಬೆಲ್ಸ್’ನಿಂದ ಮಗ ಹತ್ಯೆ ಮಾಡಿದ ದುರ್ಘಟನೆ ಹೈದರಾಬಾದ್ನ ಸುಲ್ತಾನ್ ಬಜಾರ್ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಈತ ತಾಯಿಯನ್ನು ಕಾಪಾಡಲು ಬಂದ ಸೋದರಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.

ಆರೋಪಿ ಮಗನ ಹೆಸರು ಸುಧೀರ್ ಕುಮಾರ್ (24) ಎಂದು ತಿಳಿದು ಬಂದಿದೆ. ಪಾಪಮ್ಮ(48) ಕೊಲೆಯಾದ ತಾಯಿ. ಗಾಯಗೊಂಡ ಯುವತಿ ಸುಚಿತ್ರಾ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದ್ದು, ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ಒಂದೇ ಸಮ ವ್ಯಾಯಾಮ ಮಾಡುತ್ತಿದ್ದ. ಅದನ್ನು ನೋಡಿದ ತಾಯಿ, ಮಗನನ್ನು ಮಲಗುವಂತೆ ಹೇಳಿದರು. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.

'; } else { echo "Sorry! You are Blocked from seeing the Ads"; } ?>

ಸದ್ಯ ಸುಚಿತ್ರಾ ಅಪಾಯದಿಂದ ಪಾರಾಗಿದ್ದಾಳೆ. ಸುಧೀರ್​​ನನ್ನು ಇನ್ನೂ ಬಂಧಿಸಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಸುಧೀರ್ ಶಿಕ್ಷಣ ಮುಗಿಸಿದ ಬಳಿಕ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಮನೆಯಲ್ಲೇ ಇರುತ್ತಿದ್ದ ಎಂಬ ಮಾಹಿತಿ ಸಿಕ್ಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಆತನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಕಳೆದ 7 ವರ್ಷಗಳ ಹಿಂದೆಯೇ ಆತನ ತಂದೆ ತೀರಿಕೊಂಡಿದ್ದಾರೆ. ಆಗಿನಿಂದಲೂ ತಾಯಿ, ಸೋದರಿ ಮತ್ತು ಈತ ಒಟ್ಟಿಗೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!