ಸವಣೂರು: SDPI ಸವಣೂರು ಗ್ರಾಮ ಸಮಿತಿ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಪಕ್ಷದ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ಧ್ವಜಾರೋಹಣಗೈದರು. ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಿ.ಎ.ನಝೀರ್ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾ ‘ದೇಶದ ಪ್ರತಿಯೊಬ್ಬ ನಾಗರೀಕನು ದೇಶವನ್ನು ವಿವಿಧ ರೂಪದಲ್ಲಿ ಇರುವ ಪ್ಯಾಶಿಷ್ಟ್‌ಗಳು ಮತ್ತು ನಿರುಂಕುಶ ಶಕ್ತಿಗಳ ಹಿಡಿತದಿಂದ ರಕ್ಷಿಸಲು ಬದ್ದರಾಗಬೇಕು, “ಜಾತ್ಯಾತೀತ” ಮತ್ತು “ಸಮಾಜವಾದಿ” ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದುಹಾಕಲು ತೀವ್ರ ಪ್ರಯತ್ನಗಳು ನಡೆಯುತ್ತಿದೆ. ಇದು ಸ್ಪಷ್ಟವಾಗಿ ‘ಹಿಂದು ರಾಷ್ಟ್ರ’ ಎಂದು ಘೋಷಿಸಲು ಮನುವಾದಿಗಳ ಪಿತೂರಿಯ ಒಂದು ಭಾಗವಾಗಿದೆ ಇದರ ವಿರುದ್ದ ಪ್ರತಿಯೊಬ್ಬ ನಾಗರೀಕರು ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಬಾಬು N.ಸವಣೂರು ಮಾತನಾಡಿ, ಸಂವಿಧಾನ ವನ್ನು ರಚಿಸಿದ್ದು ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಓರ್ವ ದಲಿತ ಎಂಬ ಕಾರಣದಿಂದ ಇಂದು ಮನುವಾದಿಗಳು ಸಂವಿಧಾನ ವನ್ನು ತಿರುಚುವ ಕೆಲಸಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಿರುವುದು ಇದರ ವಿರುದ್ದ SDPI ಪಕ್ಷವು ಹೋರಾಟ ಮಾಡಲಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, PFI ಸವಣೂರು ಡಿವಿಝನ್ ಅಧ್ಯಕ್ಷರಾದ ರಫೀಕ್ M.S, PFI ಸವಣೂರು ಏರಿಯ ಅಧ್ಯಕ್ಷ ಇರ್ಷಾದ್ ಸರ್ವೆ, ಚಾಪಲ್ಲ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಉಮ್ಮರ್ ಕೆನರಾ ಉಪಸ್ಥಿತರಿದ್ದರು.
ಸವಣೂರು ಬ್ಲಾಕ್ ಅಧ್ಯಕ್ಷರಾದ ರಫೀಕ್ ಎಂ.ಎ ಸ್ವಾಗತಿಸಿ,
ಗ್ರಾಮ ಸಮಿತಿ ಕಾರ್ಯದರ್ಶಿ ರಫೀಕ್ P ಧನ್ಯವಾದಗೈದರು.