ಪಾಟ್ರಕೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರಾದ ಅಶ್ರಪ್ ತಾಳಿಪಡ್ಪುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರಾದ ಆದಂ ಕುಂಞ ಹಾಜಿಯವರು ಧ್ವಜಾರೋಹಣ ಮಾಡಿದರು.

ಶಾಲೆಗೆ ದಾನ ನೀಡಿದ ಕೊಡುಗೈ ದಾನಿಗಳಾದ ಅಬ್ಬಾಸ್ ಕೊಡಪದವು ಹಾಗು ರೊಬರ್ಟ್ ಲಸ್ರಾದೊರವರನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ಪಂಚಾಯತ್ ಸದಸ್ಯರಾದ ಹಬೀಬ್ ಮುಹ್ಸಿನ್, ವನಿತಾ ಕರಿಮಜಲು, ಶಾಲಾಭಿವೃಧಿ ಸಮಿತಿಯ ಉಪಾಧ್ಯಕ್ಷೆ ಬದ್ರುನ್ನಿಸ ಮಾಜಿ ಅಧ್ಯಕ್ಷರಾದ ಜಬ್ಬರ್ ಪಾಟ್ರಕೋಡಿ, ನಿವೃತ್ತ ಶಿಕ್ಷಕರಾದ ಮಹಮ್ಮದ್ ಮಾಸ್ಟರ್ ಶಾಲಾಭಿವೃಧಿ ಸಮಿತಿ ಸದಸ್ಯರಾದ ಹರೀಶ್ ಕುದ್ದುಂಬ್ಲಾಡಿ, ರಫೀಕ್ ಮದನಿ, ಅಬ್ದುಲ್ ರಜಾಕ್ ಪಾಟ್ರಕೋಡಿ ಬಶೀರ್, ಕರಿಮಜಲು, ಹಾಗು ಶಾಲಾ ಗುರುಗಳು, ವಿದ್ಯಾರ್ಥಿಗಳೆಲ್ಲರು ಭಾಗವಹಿಸಿದ್ದರು ಗುರುಗಳಾದ ಮಮತಾ ಟೀಚರ್ ಸ್ವಾಗತಿಸಿ ಮುಬಾರಕ್ ಸರ್ ಕಾರ್ಯಕ್ರಮ ನಿರೂಪಿಸಿದರೆ, ಗುರುಗಳಾದ ಪ್ರಭಾವತಿ ರವರು ಸನ್ಮಾನಿತರ ವರದಿ ಪತ್ರವನ್ನು ಓದಿದರು ಗುರುಗಳಾದ ಶೋಭವತಿರವರು ಅಭಿನಂದಿಸಿದರು
ಮುಖ್ಯ ಗುರುಗಳಾದ ಶರಣಪ್ಪರವರು ಆಗಮಿಸಿದ ಎಲ್ಲರಿಗೂ ಶುಭಹಾರೈಸಿದರು.
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ