ಮುಡಿಪು:ರಕ್ತದಾನ ಎಂಬುವುದು ಜೀವ ಕೋಟಿಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ.ರಕ್ತದಾನವು ಎಲ್ಲರನ್ನೂ ಒಂದಾಗಿಸುವ ಅಮೂಲ್ಯ ಬಂಧವಾಗಿದೆ.

ಆಟೋ ರಾಜಕನ್ಮಾರ್ ಹೆಲ್ಪ್ ಲೈನ್ ಗ್ರೂಪ್ ಮತ್ತು ರಾಜ್ಯದ ಅತೀ ದೊಡ್ಡ ರಕ್ತದಾಣಿಗಳ ಸಂಸ್ಥೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ವತಿಯಿಂದ ಐತಿಹಾಸಿಕ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಆಟೋ ರ್ಯಾಲಿ ಕಾರ್ಯಕ್ರಮ ನಾಳೆ 2022 ಜನವರಿ 30 ರಂದು ಆದಿತ್ಯವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆ ವರೆಗೆ ಸಾಂಬಾರ್ ತೋಟ ಶಾಲೆ ಮುಡಿಪು ಇಲ್ಲಿ ನಡೆಯಲಿದೆ ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಕಾರ್ಯನಿರ್ವಾಹಕರು ಮಾಧ್ಯಮಕ್ಕೆ ತಿಳಿಸಿದರು.

ಮುಡಿಪು ವ್ಯಾಪ್ತಿಯಲ್ಲಿ ಐತಿಹಾಸಿಕ ಮುನ್ನಡಿಗೆ ಈ ಒಂದು ರಕ್ತದಾನ ಶಿಬಿರ ಚರಿತ್ರೆ ಬರೆಯಲಿದೆ.
ಹಲವಾರು ಮಂದಿಗಳು ರಕ್ತದಾನ ಮಾಡಿ ಜೀವದಾನಿಯಾಗಳಿದ್ದಾರೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಬ್ಲಡ್ ಹೆಲ್ಪ್ ಕೇರ್ ಮನವಿ ಮಾಡಿದೆ.