ಮಂಗಳೂರು: ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸ್ ತಂಡ ತಲಪಾಡಿ ಟೋಲ್ ಗೇಟ್ ಸಮೀಪ ಇಂದು ಬೆಳಿಗ್ಗೆ ಬಂಧಿಸಿದೆ.
ದನ ಸಾಗಟದ ಖಚಿತ ಮಾಹಿತಿ ಪಡೆದು ಟೋಲ್ ಗೇಟ್ ಸಮೀಪ ತಪಾಸಣೆಗಿಳಿದ ಸಿಸಿಬಿ ತಂಡ ಇಕೋ ಕಾರಲ್ಲಿ ಕೇರಳದಿಂದ ಉಳ್ಳಾಲ ಕೋಡಿಗೆ ಸಾಗಣೆ ಮಾಡುತ್ತಿದ್ದ 160 ಕೆ.ಜಿ ದನದ ಮಾಂಸವನ್ನ ವಶಪಡಿಸಿದ್ದು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಉಳ್ಳಾಲ ಕೋಟೆಪುರ, ಕೋಡಿ ನಿವಾಸಿಗಳಾದ ಶೋಯೆಬ್ ಅಕ್ತರ್, ಮಹಮ್ಮದ್ ಮುಝಮ್ಮಿಲ್, ಅಮೀನ್ ಮತ್ತು ಹುಸೇನ್ ಬಂಧಿತರಾಗಿದ್ದು. ಸಿಸಿಬಿಯವರು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ಕಾಸರಗೋಡು ಜಿಲ್ಲೆಯ ಬಂದ್ಯೋಡಿನ ಮೊಹಮ್ಮದ್ ಎಂಬವರಿಂದ ದನ ಖರೀದಿಸಿ, ಅವರ ಮನೆಯಲ್ಲೇ ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡುತ್ತಿದ್ದರು.
ಈಕೋ ಕಾರಿನಲ್ಲಿ ದನದ ಮಾಂಸ, ಮೂರು ತಲೆಗಳು, ದನದ ಚರ್ಮ ಪತ್ತೆಯಾಗಿದೆ. ಪೊಲೀಸರ ದಾಳಿಯ ಸಂದರ್ಭ ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 3.10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.