';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ರಾಜಕೀಯನೇ ಹಾಗೆ, ಯಾರು ಮಿತ್ರರಲ್ಲ ಯಾರೂ ಶತ್ರುಗಳಲ್ಲ ಎಂಬ ಮಾತಿದೆ. ಅದರಂತೆ ಇಂದು ಸೈದ್ದಾಂತಿಕವಾಗಿ ಕಟು ವಿರೋಧಿಗಳಾದ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ, ಶಾಸಕ ಯು.ಟಿ ಖಾದರ್ ದ.ಕ ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆಯ ವೇಳೆ ಸ್ವತಃ ಉಸ್ತುವಾರಿ ಸಚಿವರ ಕಚೇರಿಗೆ ತೆರಳಿ ಕೈಕುಲುಕಿ ಆಲಿಂಗಿಸಿ ಶುಭ ಹಾರೈಸಿದ್ದಾರೆ.
ಈ ಮೂಲಕ ಸೈದ್ದಾಂತಿಕ ನೆಲೆಯ ರಾಜಕೀಯ ಮರೆತು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಇದಕ್ಕೂ ಮೊದಲು ಕಚೇರಿ ಉದ್ಘಾಟನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಚಿವ ಸುನೀಲ್ ‘ಹಿಜಾಬ್ ವಿಷಯದಲ್ಲಿ ಖಾದರ್, ಸಿದ್ದರಾಮಯ್ಯ, ಎಸ್‌ಡಿಪಿಐ ಮಾತು ಕೇಳಬೇಡಿ ಎಂದಿದ್ದರು.