ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಸುದ್ದಿ ಮತ್ತೆ ಮುಂದುವರೆದಿದ್ದು, ಇಂದು ಹಿಜಾಬ್ ಧರಿಸಿ ನೇರವಾಗಿ ವಿದ್ಯಾರ್ಥಿಗಳು ಕಾಲೇಜು ಆವರಣದೊಳಗೆ ಪ್ರವೇಶಿಸಿದ್ದಾರೆ. ಆದರೆ ಅವರನ್ನು ತರಗತಿಗೆ ಪ್ರವೇಶಿಸಲು ಬಿಡದೇ ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಿದ್ದಾರೆ.
ಇಂದು ಬೆಳಗ್ಗೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಪ್ರಾಂಶುಪಾಲರು ಹಿಜಾಬ್ ತೆಗೆದು ತರಗತಿಗೆ ತೆರಳುವಂತೆ ಸೂಚಿಸಿದ್ದಾರೆ.
ಇದಕ್ಕೆ ಒಪ್ಪದ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ ಬಗ್ಗೆ ತಿಳಿಸಿದ್ದಾರೆ. ಆದರೂ ಹಿಜಾಬ್ ಧರಿಸಿ ತರಗತಿಗೆ ಹೋಗಲು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಅವರನ್ನು ಎಂದಿನಂತೆ ತರಗತಿಗೆ ಹೋಗಲು ಬಿಡದೇ ಪ್ರತ್ಯೇಕ ಕೊಠಡಿಯಲ್ಲಿ ಕೂರಲು ವ್ಯವಸ್ಥೆ ಮಾಡಿದ್ದಾರೆ. ಇದೇ ವಿದ್ಯಾರ್ಥಿಗಳು ಕಳೆದ ವಾರ ಗೇಟಿನಿಂದ ಹೊರಗೆ ಕುಳಿತು ಪ್ರತಿಭಟಿಸಿದ್ದರು.
ಈ ವೇಳೆ ಶನಿವಾರ ಸರ್ಕಾರದ ಹೊರಡಿಸಿದ ವಸ್ತ್ರಸಂಹಿತೆ ಕುರಿತು ಸರಕಾರದ ಆದೇಶ ಹೊರಡಿಸಿತ್ತು. ಇಂದು ಅದೇ ಸರ್ಕಾರದ ಆದೇಶ ಪ್ರತಿಯನ್ನು ಕಾಲೇಜಿನ ಗೇಟಿಗೆ ಕಾಲೇಜು ಸಿಬ್ಬಂದಿ ಅಂಟಿಸಿದ್ದಾರೆಂದು ತಿಳಿದು ಬಂದಿದೆ.