ಬಂಟ್ವಾಳ: ಹಿಜಾಬ್ ,ಕೇಸರಿ ಶಾಲಿನ ಪ್ರಕರಣ ಈಗ ಮಂಗಳೂರು ಭಾಗಕ್ಕೂ ತಲುಪಿದ್ದು ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದ ಘಟನೆ ಮಂಗಳವಾರ ನಡೆದಿದೆ.

ಈಗಾಗಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದು ಘೋಷಣೆ ಕೂಗಿದ್ದಾರೆ.
ವಿವಾದ ಸೃಷ್ಟಿಸಲು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕೊಂಡು ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮೆಸೇಜ್ ಗಳು ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳು ಶಾಲು ಧರಿಸಿ ಬಂದಿದ್ದಾರೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ವಿಧ್ಯಾರ್ಥಿಗಳು ಘರ್ಷನೆ ನಡೆಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಶಾಲಾ ಮುಖ್ಯಸ್ಥರು ಯಾವ ರೀತಿಯ ಕ್ರಮ ಕೈಗೊಳ್ಳಾಲಿದ್ದಾರೆಂದು ತಿಳಿದು ಬರಬೇಕಾಗಿದೆ.