ಬಂಟ್ವಾಳ: ಸಜೀಪ ಸಮೀಪದ ಬೋಳಮೆ ಎಂಬಲ್ಲಿಯ ರಹಮಾನ್ ಜುಮಾ ಮಸೀದಿಗೆ ನೀರಿನ ಅಭಾವವಿದ್ದು, ಬೋರ್‌ವೆಲ್‌ನ ಅಗತ್ಯವಿದೆ ಎಂದು ಮನವಿ ಬಂದಾಗ ದಾನಿಯೊಬ್ಬರ ಸಹಕಾರದಿಂದ ಎಮ್.ಎನ್.ಜಿ.ಫೌಂಡೇಶನ್(ರಿ) ಸಂಸ್ಥೆಯು ಮಸೀದಿಗೆ ಬೋರ್‌ವೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.
ಇದು ಎಮ್ ಎನ್ ಜಿ ಸಂಸ್ಥೆಯ “ಮಸೀದಿಗೆ ನೀರು” ಯೋಜನೆಯಡಿಯಲ್ಲಿ ಸಂಸ್ಥೆ ನಿರ್ಮಿಸಿದ ಮೂರನೇ ಬೋರ್ ವೆಲ್ ಆಗಿದೆ. ಈ ಹಿಂದೆ ಬಂಟ್ವಾಳದ ನಂದಾವರ ದಾಸರಗುಡ್ಡೆ ಜುಮಾ ಮಸೀದಿ ಮತ್ತು ಅಸೈಗೋಳಿ ಜುಮಾ ಮಸೀದಿಗೆ ಬೋರ್ ವೆಲ್ ವ್ಯವಸ್ಥೆ ಮಾಡಿಕೊಟ್ಟದ್ದನ್ನು ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮಸೀದಿಯ ಖತೀಬರಾದ ಯೂಸುಫ್ ಉಸ್ತಾದ್ ದುಆದೊಂದಿಗೆ ಚಾಲನೆ ನೀಡಿದರು. ಮಸೀದಿಯ ಅಧ್ಯಕ್ಷರಾದ ನಾಸಿರ್ ಬೋಳಮೆ, ಉಪಾಧ್ಯಕ್ಷರಾದ ರಫೀಕ್ ಬೋಳಮೆ, ಕಾರ್ಯದರ್ಶಿ ತಫ್ಸೀರ್ ಹಾಗೂ ಎಮ್.ಎನ್.ಜಿ. ಫೌಂಡೇಶನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಮನ್ಸೂರ್ ಬಿ.ಸಿ.ರೋಡ್, ಶಿಹಾಬ್ ತಂಙಳ್ ಮತ್ತು ಸದಸ್ಯರಾದ ಫೈಝಲ್ ಸಂತೋಷ್ ನಗರ, ಹನೀಫ್ ಸಜೀಪ ಉಪಸ್ಥಿತರಿದ್ದರು.