ಬೆಂಗಳೂರು: ರಾಜ್ಯದಲ್ಲಿ ತಾರಕ್ಕೇರಿರುವ ಹಿಜಾಬ್ ಚರ್ಚೆ ಕೋರ್ಟ್ ಮೆಟ್ಟಿಲೇರಿದ್ದು ಇದೀಗ ಹೈಕೋರ್ಟ್ ತ್ರಿ ಸದಸ್ಯ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.
ಕಾಲೇಜು ಕ್ಯಾಂಪಸ್ ಗಳಲ್ಲಿ ಹಿಜಾಬ್ ಧರಿಸದಂತೆ ಶಾಲಾ ಮಂಡಳಿ ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದು ಈ ಬಗ್ಗೆ ತರಗತಿಗೆ ಪ್ರವೇಶಕ್ಕೂ ಕೂಡ ಅವಕಾಶ ನೀಡಿರಲಿಲ್ಲ ಈ ಮದ್ಯೆ ರಾಜ್ಯದ ವಿವಿಧ ಕ್ಯಾಂಪಸ್ ಗಳಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಹಾಕಿಕೊಂಡು ಬಂದ ಹೈಡ್ರಾಮ ಕೂಡ ನಡೆದಿತ್ತು ಈ ಮಧ್ಯದಲ್ಲಿ ವಿಷಯದ ಗಾಂಭೀರ್ಯತೆಯನ್ನು ವಿದ್ಯಾರ್ಥಿನಿಗಳು ಕೋರ್ಟ್ ಗೆ ತಿಳಿಸಿದ್ದು ಮೊನ್ನೆಯಿಂದ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
ಇದೀಗ ಇಂದು ಮತ್ತೆ ಹೈಕೋರ್ಟ್ ಈ ಬಗ್ಗೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಇನ್ನು ಹಿಜಾಬ್ ಪ್ರಿಯರ ಮತ್ತು ಕೇಸರಿ ಶಾಲು ಪ್ರಿಯರ ಚಿತ್ತ ಸೋಮವಾರದ ಹೈಕೋರ್ಟ್ ತೀರ್ಪಿನ ಸುತ್ತ ಇದೆ.
ಯಾವ ರೀತಿ ವಿಚಾರಣೆಯಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.
ಇನ್ನು ಶಾಲಾ ಕಾಲೇಜು ಆರಂಭಕ್ಕೆ ಹಾಕೋರ್ಟ್’ನಿಂದ ಗ್ರೀನ್ ಸಿಗ್ನಲ್ ಬಂದಿದ್ದು, ತೀರ್ಪು ಬರುವ ವರೆಗೆ ಶಾಲೆ ಕಾಲೇಜಿಗೆ ಕೇಸರಿ ಶಾಲು ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಸಿಜೆ ತಿಳಿಸಿದ್ದಾರೆ.