dtvkannada

ಪುತ್ತೂರು: ಹಿಜಾಬ್ ವಿವಾದ ರಾಜ್ಯದಲ್ಲಿ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪೋಲೀಸ್ ಇಲಾಖೆ ಇದೀಗ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕಾರ್ಯ ಆರಂಭಿಸಿದೆ.

ಕೋಮು ಸೂಕ್ಷ್ಮ ಹಣೆಪಟ್ಟಿ ಕಟ್ಟಿರುವ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಹಿಜಾಬ್ ಕೇಸರಿ ವಿವಾದ ಅಷ್ಟೊಂದು ಉಗ್ರ ಸ್ವರೂಪ ಪಡೆಯದಿದ್ದರೂ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ.

ಇದರ ಭಾಗವಾಗಿ ಪುತ್ತೂರು ನಗರದಲ್ಲಿಂದು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಪುತ್ತೂರಿನ ದರ್ಬೆ ವೃತ್ತದಿಂದ ಬೊಳುವಾರು ತನಕ ಮಾರ್ಚ್ ಮಾಡಿದ ಪೋಲೀಸರು ಯಾವುದೇ ಸನ್ನಿವೇಶಕ್ಕೂ ಪೋಲೀಸರು ಸಿದ್ಧ ಎಂಬ ಸಂದೇಶವನ್ನು ನೀಡಿದರು. ಜೊತೆಗೆ ಜನತೆಗೆ ಧೈರ್ಯ ತುಂಬುವ ಪ್ರಯತ್ನ ಮಾಡಿತು.

By dtv

Leave a Reply

Your email address will not be published. Required fields are marked *

error: Content is protected !!