ಉಪ್ಪಿನಂಗಡಿ: ವಿವಿಧ ರೀತಿಯ ಪ್ರತಿಭಟನೆಗಳನ್ನು ನಾವು ನೋಡುತ್ತಿದ್ದೇವೆ ಆದರೆ ಉಪ್ಪಿನಂಗಡಿಯ ಇಳಂತಿಲದಲ್ಲಿ ರಿಕ್ಷಾ ಚಾಲಕನೊರ್ವನ ಪ್ರತಿಭಟನೆ ಇದೀಗ ಅಲ್ಲಿನ ಜನರ ಆಕರ್ಷಣೆಯಾಗಿದೆ.
ಅಂಡತ್ತಡ್ಕ ಇಳಂತಿಲ ಮಾರ್ಗ ದುರಸ್ತಿ ನಡೆಯಲು ಶುರುವಾಗಿ ಸಮಯ ಸುಮಾರು ಕಳೆದರೂ ಇನ್ನೂ ಕೂಡ ಕಾರ್ಯ ಮುಕ್ತಾಯವಾಗಿಲ್ಲ.
ಇದೀಗ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ದಿನನಿತ್ಯ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಧೂಳನ್ನೇ ಉಸಿರಾಡುವ ಪರಿಸ್ಥಿತಿ ಎದುರಾಗಿದೆ.
ಇದೀಗ ದಿನನಿತ್ಯ ಧೂಳು ಮತ್ತು ಸಂಪೂರ್ಣ ಹದಗೆಟ್ಟ ರಸ್ತೆಯಿಂದ ಕಂಗಾಲಾಗಿರುವ ಅಲ್ಲಿನ ರಿಕ್ಷಾ ಚಾಲಕನೊರ್ವ ತನ್ನ ರಿಕ್ಷೆಯ ಹಿಂಬದಿ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಲ್ಲಿನ ಜನಪ್ರತಿನಿಧಿಗಳಿಗೆ ಆಕ್ರೋಶದ ಧಿಕ್ಕಾರ ಕೂಗಿದ್ದಾನೆ ಈ ಚಾಲಕ “ಯಾವುದೇ ಶಾಲೆ ಇಲ್ಲ ಶಿಕ್ಷಕರಿಲ್ಲ ಆದರೂ ವಿಶ್ವದ ಅತ್ಯುತ್ತಮ ಎಂಜಿನಿಯರ್ ಇಳಂತಿಲದಿಂದ ಅಂಡೆತ್ತಡ್ಕದ ವರೆಗಿನ ರಸ್ತೆ ಕಾಮಗಾರಿಯ ಇಂಜಿನಿಯರ್ ಯಾರು ಎಂದು ನಮಗೆ ತಿಳಿದು ಬಂದಿಲ್ಲ ಯಾಕೆಂದರೆ ಪ್ರಾರಂಭವಾಗಿ ತಿಂಗಳುಗಳು ಕಳೆದರೂ ಇನ್ನೂ ರಸ್ತೆ ಮತ್ತು ಧೂಳಿನ ಸಮಸ್ಯೆ ಪರಿಹಾರವಾಗಿಲ್ಲ.
ಜನರಿಗೆ 2 ಕೋಟಿಯ ಧೂಳಿನ ಭಾಗ್ಯ ಒದಗಿಸಿದ ಜನಪ್ರತಿನಿಧಿಗಳಿಗೆ ನನ್ನ ಧಿಕ್ಕಾರ” ಎಂದು ಅವರು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಿಕ್ಷಾ ಚಾಲಕನ ವಿನೂತನ ಪ್ರತಿಭಟನೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.