dtvkannada

ಬೆಳ್ಳಾರೆ: ರಬ್ಬರ್ ಶೀಟ್ ಸಾಗಾಟದ ಲಾರಿಯೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ಳಾರೆೃ ಪಂಜಿಗಾರು ತಿರುವಿನಲ್ಲಿ ನಡೆದಿದೆ.

ಸುಳ್ಯ ಐವರ್ನಾಡಿನಿಂದ ಸುಬ್ರಮಣ್ಯ ಕಡೆಗೆ ಚಲಿಸುತ್ತಿದ್ದ ಲಾರಿ ಬೆಳ್ಳಾರೆ ಪಂಜಿಗಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಬೆಳ್ಳಾರೆ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!