ಶಿವಮೊಗ್ಗ: ರಾಜ್ಯದಲ್ಲಿ ಹಿಜಾಬ್ ವಿಚಾರ ಮುಂದಿರಿಸಿ ಹೈಕೋರ್ಟ್ ತೀರ್ಪನ್ನು ಕಡೆಗಣಿಸಿ ವಿದ್ಯಾರ್ಥಿಗಳ ಮೇಲಿನ ಕಿರುಕುಳಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಸ್, ಎಸ್, ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಮಾಧ್ಯಮಕ್ಕೆ ತಿಳಿಸಿದರು.

ಪ್ರತಿಯೊಬ್ಬರು ಯಾವ ವಸ್ತ್ರ ಧರಿಸಬೇಕು ಬೇಡ ಎಂಬುವುದು ಅವರವರಿಗೆ ಬಿಟ್ಟದ್ದು ಅದು ಸಂವಿಧಾನದ ಒಂದು ಬಾಗ ಇದೀಗ ಹಿಜಾಬ್ ವಿಚಾರದಲ್ಲಿ ಸರಕಾರ ಕೈ ಹಾಕಿ ತಪ್ಪು ಮಾಡಿದೆ.
ಈ ಸಂವಿಧಾನ ವಿರೋಧಿ ಕಾರ್ಯ ವಿರುದ್ಧ SSF ರಾಜ್ಯಾದ್ಯಾಂತ ಹೋರಾಟಕ್ಕೆ ಸಿದ್ಧವಾಗಲಿದೆ ಎಂದು ಅವರು ಹೇಳಿದರು.
