ಬೆಂಗಳೂರು: ಹಿಂದಿ ಕಿರುಚಿತ್ರ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಯುವ ನಟಿ ಕಾವ್ಯಾ ಥಾಪರ್ ಕುಡಿದು ರಸ್ತೆಯಲ್ಲಿ ವಾಹನ ಚಲಾಯಿಸಿದ್ದಲ್ಲದೆ ಪುಂಡಾಟ ಆಡುವುದರ ಜೊತೆಗೆ ಕುಡಿದ ಮತ್ತಿನಲ್ಲಿ ಕಾರು ಓಡಿಸಿ, ಅಪಘಾತ ಕೂಡ ಎಸಗಿರುವುದಾಗಿ ತಿಳಿದು ಬಂದಿದೆ.
ಅಪಘಾತದ ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದ ಪೊಲೀಸರಿಗೆ ಅಶ್ಲೀಲ ಪದಗಳಿಂದ ಬೈದಿದ್ದು ಈಗ ಅವರನ್ನು ಅರೆಸ್ಟ್ ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಕಾವ್ಯಾ ಥಾಪರ್ ಅವರು ಜುಹುದಲ್ಲಿ ಕಾರು ಓಡಿಸುತ್ತಿದ್ದ ಸಂದರ್ಭದಲ್ಲಿ ಅವರು ಕುಡಿದಿದ್ದರು. ಕುಡಿದ ಅಮಲಿನಲ್ಲಿ ಅವರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಕಾರಿನಲ್ಲಿದ್ದ ವ್ಯಕ್ತಿಯು ಗಾಯಗೊಂಡಿದ್ದು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ನಟಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಿಟ್ಟಾದ ನಟಿ ಬಾಯಿಗೆ ಬಂದಂತೆ ಬೈದಿದ್ದು ಸಾಕಷ್ಟು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ‘ನಟಿ ಕಾವ್ಯಾ ಥಾಪರ್ ಅವರು ಮದ್ಯದ ಅಮಲಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಾಗ ಕಾರಲ್ಧಿದ್ದ ವ್ಯಕ್ತಿಯು ಗಾಯಗೊಂಡಿದ್ದರು.
ತದನಂತರ, ಪೊಲೀಸರೊಂದಿಗೆ ಗಲಾಟೆ ಮಾಡಿದ್ದಲ್ಲದೆ ಪೊಲೀಸರಿಗೆ ನಿಂದನೀಯ ಪದಗಳನ್ನು ಬಳಸಿದರು. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ನೀಡಿದೆ ಎಂದು ಜುಹು ಪೊಲೀಸರು ತಿಳಿಸಿದ್ದಾರೆ.