ಉಳ್ಳಾಲ: ಮಕ್ಕಳು ಆಡುವ ಉಯ್ಯಾಲೆ ಬಿದ್ದು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ನಡೆದಿದೆ.
ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ವ್ಯಾಪಾರ ನಡೆಸುತ್ತಿದ್ದ ತೊಟ್ಟಿಲಿನಲ್ಲಿ ಮಕ್ಕಳು ಆಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೂರು ಮಕ್ಕಳಿಗೆ ಸ್ವಲ್ಪ ಹೆಚ್ಚು ಗಾಯಗಳಾಗಿದ್ದು ಒಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಉರೂಸ್ ಪ್ರಯುಕ್ತ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಾಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದರು.
ಏಕಾಏಕಿ ವ್ಹೀಲ್ ಜಾಯಿಂಟ್ ತಪ್ಪಿದ ಪರಿಣಾಮ ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಉಮ್ಮರ್ ಫಾರೂಕ್ (42), ಮೊಹಮ್ಮದ್ ಆಯೂಬ್ (7) ಮಶಿಥಾ (18) ನೂರ್ ಜಹಾನ್ (36) ಸಲೇಕಾ (28) ಮತ್ತು ಸಮೀರ್( 41) ಎಂದು ಗುರುತಿಸಲಾಗಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ