ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಬೈಕ್ ಸವಾರ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ. ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದ ಬೈಕ್ ಸವಾರನನ್ನು ಡಿ.ಜೆ. ಹಳ್ಳಿ ಸಂಚಾರಿ ಪೊಲೀಸರು ನಿಲ್ಲಿಸಿ ಪ್ರಶ್ನಿಸಿದ್ದು ಸವಾರ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ.
ಬೈಕ್ ಸವಾರನ ಮೇಲೆ ಸುಮಾರು 81 ಕೇಸ್ಗಳಿದ್ದು 44 ಸಾವಿರ ದಂಡ ಬಾಕಿ ಇದೆ. ಹೀಗಾಗಿ ಸಾವಿರಾರು ದಂಡ ಬಾಕಿ ಉಳಿಸಿಕೊಂಡು ಹಾಯಾಗಿ ತಿರುಗಾಡುತ್ತಿರುವ ಬೈಕ್ ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಇದರಿಂದ ಸವಾರ ಪೊಲೀಸರ ವಿರುದ್ಧವೇ ಕೂಗಾಡಿದ್ದಾನೆ.
ಹೆಲ್ಮೆಟ್ ಹಾಕದೇ ಓಡಾಟ ಮಾಡುತ್ತಿದ್ದ ಬೈಕ್ ಸವಾರನನ್ನು ಡಿ.ಜೆ. ಹಳ್ಳಿ ಸಂಚಾರಿ ಪೊಲೀಸರು ನಿಲ್ಲಿಸಿ ದಂಡ ಕಟ್ಟುವಂತೆ ಹೇಳಿದ್ದಾರೆ. ಆದ್ರೆ ಬೈಕ್ ಸವಾರ ದಂಡ ಪಾವತಿಸದೆ ಪೊಲೀಸರಿಗೆ ನಿಂದಿಸಿದ್ದಾನೆ. ನೀವು ಸಾಚಾನಾ ಎಂದು ಬೈದಿದ್ದಾನೆ. ಮನೆ ಬಳಿಯೇ ಓಡಾಡುತ್ತಿರುವುದರಿಂದ ನಾನು ಹೆಲ್ಮೆಟ್ ಹಾಕಲ್ಲ ಎಂದು ವಾಗ್ವಾದ ನಡೆಸಿದ್ದಾನೆ. ಬೈಕ್ ಸವಾರ ಬರೋಬ್ಬರಿ 44 ಸಾವಿರ ದಂಡ ಬಾಕಿ ಉಳಿಸಿಕೊಂಡಿದ್ದು ದಂಡ ಕಟ್ಟದೇ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಹೆಲ್ಮೆಟ್ ಹಾಕದೇ, ನಂಬರ್ ಪ್ಲೇಟ್ ಹಾಕದೇ ಸಂಚರಿಸುತ್ತಿದ್ದಾನೆ. ಸದ್ಯ ಬೈಕ್ ಸವಾರನ ಪತ್ತೆಗೆ ಡಿ.ಜೆ.ಹಳ್ಳಿ ಸಂಚಾರಿ ಪೊಲೀಸರು ಬಲೆ ಬೀಸಿದ್ದಾರೆ.