';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಕರ್ನಾಟಕದ ಅಜ್ಮೀರ್ ಎಂದೇ ಪ್ರಸಿದ್ದಿಯಿರುವ ಉಳ್ಳಾಲ ಮಖಾಂ ಉರೂಸ್ ವಿಜ್ರಂಭಣೆಯಿಂದ ನಡೆಯುತ್ತಿದ್ದು ಮಾರ್ಚ್ ಒಂದರಂದು ಮಂಗಳವಾರ ರಾತ್ರಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿರುವುದೆಂದು ನೂರೇ ಅಜ್ಮೀರ್ ಕರ್ನಾಟಕ ಲೀಡರ್ಸ್ ಬಳಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ನೂರೇ ಅಜ್ಮೀರ್ ಬೆಳಗ್ಗಿನ ಜಾವ ನಡೆಯುತ್ತಿರುವ ಮಜ್ಲಿಸಾಗಿದ್ದು ಪ್ರತೀದಿನ ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರೇ ಅಜ್ಮೀರ್ ಮಜ್ಲಿಸ್ ನಡೆಸಿದಾಗ ಸಾವಿರಾರು ಜನಸಾಗರವೇ ಸೇರಿದ್ದು ಈ ಬಾರಿ ಉಳ್ಳಾರಕ್ಕೆ ಬೃಹತ್ ಜನಸಾಗರವೇ ಸೇರಲಿರುವುದಾಗಿ ಅಂದಾಜಿಸಲಾಗಿದೆ.
ಮಾರ್ಚ್ ಒಂದು ರಜಬ್ 27ರ ಸುನ್ನತ್ ಉಪವಾಸವಿದ್ದು ಹತ್ತಿರದವರು ಉಪವಾಸ ತೊರೆದು ಬರುವಂತೆಯೂ ದೂರದವರಿಗೆ ಉಳ್ಳಾಲದಲ್ಲಿ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದ್ದಾರೆ.
ನೂರೇ ಅಜ್ಮೀರ್ ರಾತ್ರಿ 8:00ಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ.
ಉಸ್ತಾದ್ ವಲಿಯುದ್ದೀನ್ ಫೈಝಿ ನೇತೃತ್ವ ವಹಿಸಲಿದ್ದಾರೆ.