ಉಳ್ಳಾಲ: ಸುನ್ನೀ ಕಾರ್ಯಕರ್ತರೆಲ್ಲರೂ ಇನ್ನು ಪಂಗಡಗಲಾಗದೆ ಒಟ್ಟಾಗಿ ಕಾರ್ಯಚರಿಸಬೇಕೆಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ಕರೆ ಕೊಟ್ಟರು.
ಅವರು ನಿನ್ನೆ ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಎರಡು ಪಂಗಡಗಳು ಇಲ್ಲಿನ ಮತೀಯ ಶಕ್ತಿಗಳಿಗೆ ಆಹಾರವಾಗುತ್ತಿದೆ, ರಾಜಕೀಯ ಶಕ್ತಿಗಳು ಇದರ ನಡುವೆ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಇದೀಗ ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದಗಳನ್ನು ನಮ್ಮ ಐಕ್ಯ ಶಕ್ತಿಯೊಂದಿಗೆ ಪರಿಹಾರ ಕಾಣಬೇಕಿದೆ.
ಸುನ್ನೀ ಕಾರ್ಯಕರ್ತರೆಲ್ಲರೂ ಸುನ್ನತ್ ಜಮಾಅತ್ತಿನ ವಿಚಾರದಲ್ಲಿ ಒಟ್ಟಾಗಿ ಕಾರ್ಯಾಚರಿಸಬೇಕೆಂದು ಉಸ್ತಾದ್ ಲಕ್ಷಾಂತರ ಮಂದಿ ಜನರನ್ನುದೇಶಿಸಿ ಮಾತನಾಡಿದರು.
ಕರ್ನಾಟಕ ಔಕಾಫ್ ಮಂಡಳಿ ಅಧ್ಯಕ್ಷ ಶಾಫಿ ಸಹದಿ ಪ್ರಾಸ್ತಾವಿಕ ಮಾತನಾಡಿ ಉಳ್ಳಾಲದಲ್ಲಿರುವ ಸಣ್ಣ ಪುಟ್ಟ ವಿವಾದಗಳನ್ನು ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳ ಬೇಕಿದೆ, ಉಳ್ಳಾಲದ ಈ ಐಕ್ಯತೆ ಇನ್ನೂ ಮುಂದುವರೆಸಿ ಕೊಂಡು ಹೋಗಬೇಕು ಎಂದು ಅವರು ಹೇಳಿದರು.
ಉಳ್ಳಾಲ ಖಾಝಿ ಖುರತ್ ಸಾದಾತ್ ಕೂರತ್ ತಂಙಳ್ ದುಆ ಆಶೀರ್ವಚನಗೈದರು.
ಖ್ಯಾತ ಪ್ರಬಾಷಣಗಾರ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದರು.
ವೇದಿಕೆಯಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕಾವಲ್ ಕಟ್ಟೆ ಹಜ್ರತ್, ಪಳ್ಳಂಗೋಡ್ ಸಹದಿ, ಶಾಸಕ ಯು.ಟಿ ಖಾದರ್, ಅಬ್ದುಲ್ಲಾ ಕುಞಿ ಯನಪೋಯ, ಮುಮ್ತಾಝ್ ಅಲಿ, ಹೈದರ್ ಪರ್ತಿಪ್ಪಾಡಿ ಮತ್ತು ಹಲವಾರು ಗಣ್ಯ ನಾಯಕರು ಉಲಮಾಗಳು ಉಮಾರಾಗಳು ಉಪಸ್ಥಿತರಿದ್ದರು.
ನಿನ್ನೆಯ ಉಳ್ಳಾಲದ ವೇದಿಕೆ ಐಕ್ಯತೆಗೆ ಸಾಕ್ಷಿಯಾಯಿತು. ಎರಡು ಸಮಸ್ತದ ದಿಗ್ಗಜರು ಬಾಗವಹಿಸಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು .ಇದೇ ವೇಳೆ ಸೇರಿದ ಲಕ್ಷಾಂತರ ಮಂದಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಸಂತೋಷ ವ್ಯಕ್ತಪಡಿಸಿದರು.
ಉಳ್ಳಾಲ ಸೈಯದ್ ಮದನಿ ದರ್ಗಾ ಶರೀಫ್ ಉರೂಸ್ ಸಮಾರಂಭದಲ್ಲಿ ” ಸುಲ್ತಾನುಲ್ ಉಲಮಾ A P ಉಸ್ತಾದರ ಮತ್ತು ಸೀರಾಜುದ್ದೀನ್ ಖಾಸಿಮಿಯ ಪ್ರಭಾಷಣ ವೀಕ್ಷಿಸಲು ಭಾರೀ ಜನಸಾಗರ ಸೇರಿತ್ತು. ಉಸ್ತಾದರು ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಝಿಂದಾಬಾದ್ ಮೊಳಗಿಸಿ ಆತ್ಮೀಯ ನಾಯಕನನ್ನು ಬರಮಾಡಿಕೊಂಡರು.