ಮಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಹಾಗೂ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನದ ಬೆಲೆ ಭಾರೀ ಏರಿಕೆಯತ್ತ ಸಾಗಿದೆ. ಇಂದು ಚಿನ್ನದ ಬೆಲೆ ಹೊಸ ದಾಖಲೆ ಬರೆದಿದ್ದು, 10 ಗ್ರಾಂ ಬಂಗಾರದ ಬೆಲೆ 1,300 ರೂ. ಏರಿಕೆಯಾಗಿದ್ದು, 1 ಕೆಜಿ ಚಿನ್ನಕ್ಕೆ ಒಂದೇ ದಿನದಲ್ಲಿ 13,000 ರೂ. ಹೆಚ್ಚಳವಾಗಿ ತನ್ನ ಹೊಸ ದಾಖಲೆಯತ್ತ ಸಾಗುತ್ತಿದೆ.
ರಷ್ಯಾ – ಉಕ್ರೇನ್ ಸಂಘರ್ಷದಿಂದಾಗಿ ಚಿನ್ನದ ಪೂರೈಕೆ ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು ಕೂಡ ಏರಿಕೆಯತ್ತ ಸಾಗಿದೆ. ಕಳೆದ ಒಂದು ವಾರದಲ್ಲಿ ಚಿನ್ನಕ್ಕೆ 10 ಗ್ರಾಂಗೆ 5000 ರೂ. ಹೆಚ್ಚಳವಾಗುವ ಮೂಲಕ ಮತ್ತೆ ಬಂಗಾರದ ಬೆಲೆ (Gold Price) ದಾಖಲೆ ಬರೆದಿದೆ. ಹಾಗೇ, ಹಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 75,000 ದಾಟುವ ಮೂಲಕ ದಾಖಲೆ ನಿರ್ಮಿಸಿದೆ.
ಒಂದು ಗ್ರಾಂ ಚಿನ್ನಕ್ಕೆ 4,600 ಆಸುಪಾಸಿನಲ್ಲಿದ್ದ ದರ, ಒಂದೇ ವಾರದ ಅಂತರದಲ್ಲಿ ಗ್ರಾಂ ಚಿನ್ನಕ್ಕೆ 5000ರೂ ಗಡಿ ದಾಟಿದೆ.
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗುತ್ತಲೇ ಇದೆ. ನಿನ್ನೆ ಒಂದೇ ದಿನದಲ್ಲಿ ಬೆಳ್ಳಿಯ ದರ 1 ಕೆಜಿಗೆ 1,000 ರೂ. ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದಲ್ಲಿ 1 ಗ್ರಾಂ ಚಿನ್ನದ ದರ – 5070( ಒಂದು ಪವನ್ – 40,560/-)
ಮಂಗಳೂರು ಭಾಗದಲ್ಲಿ – ಒಂದು ಗ್ರಾಂ 5030ರೂ (ಒಂದು ಪವನ್ 40,240/-)
ಕಾಸರಗೋಡು ಭಾಗದಲ್ಲಿ – ಒಂದು ಗ್ರಾಂ ಚಿನ್ನ 4980ರೂ( ಒಂದು ಪವನ್ (39,840/-)
