dtvkannada

'; } else { echo "Sorry! You are Blocked from seeing the Ads"; } ?>

ಕೊಪ್ಪಳ: ಮದುವೆ ನಿಶ್ಚಿತಾರ್ಥಕ್ಕೆಂದು ಹೊರಟ್ಟಿದ್ದ ಕುಟುಂಬದ ಟ್ರ್ಯಾಕ್ಟರೊಂದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಯಮನೂರಪ್ಪ ಸಿಂಧನೂರು(55), ಅಂಬಮ್ಮ (45), ದ್ಯಾವಮ್ಮ (60), ಶೇಶಪ್ಪ ಬಂಡಿ (40)ಅಸುನೀಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಮೃತಪಟ್ಟ ವ್ಯಕ್ತಿಗಳು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ಇಂದಿರಾಗಾಂಧಿ ನಿವಾಸಿಗಳಾಗಿದ್ದು, ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಕಾರಟಗಿ ಪಟ್ಟಣದ 18ನೇ ವಾರ್ಡಿನ ನಿವಾಸಿಗಳು ನಿಶ್ಚಿತಾರ್ಥಕ್ಕೆಂದು ಕಾರಟಗಿಯಿಂದ ಕನಕಗಿರಿಗೆ 25ಕ್ಕೂ ಹೆಚ್ಚು ಮಂದಿ ಟ್ಯಾಕ್ಟರ್ ನಲ್ಲಿ ಹೊರಟಿದ್ದರು. ಈ ಸಂದರ್ಭ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

'; } else { echo "Sorry! You are Blocked from seeing the Ads"; } ?>

ಉಳಿದಂತೆ ನಾಲ್ವರ ಸ್ಥಿತಿ ಗಂಭಿರವಾಗಿತ್ತು.ಉಳಿದ ಇಬ್ಬರು ಮತ್ತೆ ಮೃತಪಟ್ಟಿದ್ದು ಗಾಯಾಳುಗಳನ್ನು ಕಾರಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!