dtvkannada

ಸುಳ್ಯ: ಆಟೋ ರಿಕ್ಷಾ ಟೆಂಪೋ ಮಾದರಿಯ ವಾಹನದಲ್ಲಿ ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ಮತ್ತು ಟೆಂಪೋ ವಾಹನಗಳ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಬಾಳೆಮಕ್ಕಿ ಟ್ಯಾಕ್ಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಟೆಂಪೋದಲ್ಲಿ ಸೋಣಂಗೇರಿ ಮೂಲದ ವ್ಯಕ್ತಿಯೋರ್ವರ ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದಾಗ ಸುಳ್ಯ ಬಾಳೆಮಕ್ಕಿ ಬಳಿ ಹಳೆಗೇಟು ಕಡೆಯಿಂದ ಸುಳ್ಯದತ್ತ ತಲುಪಿದಾಗ ಟೆಂಪೋ ರಿಕ್ಷಾದ ಹಿಂಭಾಗಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಗುದ್ದಿದ ಪರಿಣಾಮ ಘಟನೆ ಸಂಭವಿಸಿದೆ.

ಈ ಸಂದರ್ಭದಲ್ಲಿ ಟ್ಯಾಕ್ಸಿ ನಿಲ್ದಾಣದ ಕೆಲ ಚಾಲಕರು ಸೇರಿ ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!