ಬೆಂಗಳೂರು: ಸರ್ಕಾರಿ ಶಾಲಾ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರದಂತೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್ ತೀರ್ಪು ಇಂದು ಇದೀಗ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ.

ಹಿಜಾಬ್ ತಿರ್ಪನ್ನು ಹಲವು ದಿನಗಳಿಂದ ವಿಚಾರಣೆ ನಡೆಸಿಕೊಂಡು ಬಂದಿದ್ದು ಇದೀಗ ಇಂದು ಅಂತಿಮ ತಿರ್ಪಿಗೆ ದಿನ ಕಾಯ್ದಿರಿಸಿದ್ದು ಆ ದಿನವು ಇಂದಾಗಿದೆ.
ಈಗಾಗಲೇ ಈ ಒಂದು ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ ರಾಜ್ಯದ ಕಾಲೇಜುಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾರ್ಚ್ 15 ರಿಂದ ಮಾರ್ಚ್ 19ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ| ಕೆವಿ ರಾಜೇಂದ್ರ ತಿಳಿಸಿದ್ದಾರೆ.
