ಪುತ್ತೂರು, ಮಾ.17: ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪಿನ ವಿರುದ್ಧವಾಗಿ ಮಾರ್ಚ್ 17 ಕರ್ನಾಟಕ ರಾಜ್ಯ ಬಂದ್ ಮಾಡಲು ಅಮೀರೇ ಶರೀಅತ್ ಸಗೀರ್ ಅಹಮದ್ ರಶಾದಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯಾದ್ಯಂತ ಮುಸ್ಲಿಮರು ತಮ್ಮ ವ್ಯಾಪಾರ ಮಳಿಗೆಗಳನ್ನು ಸ್ವಯಂ ಪ್ರೇರಿತರಾಗಿ ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಹಿಜಾಬ್ ಬಗೆಗಿನ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ತಮ್ಮ ಅಸಮದಾನ ವ್ಯಕ್ತಪಡಿಸಿದರು.
ಈ ಪ್ರಯುಕ್ತ ಪುತ್ತೂರಿನಲ್ಲಿ ಮುಸ್ಲಿಂ ಒಕ್ಕೂಟ ಬಂದ್ ಬೆಂಬಲವಾಗಿ ಕರೆ ನೀಡಿತ್ತು. ಹೀಗಾಗಿ ಇಂದು ಪುತ್ತೂರಿನ ಪೇಟೆಯಲ್ಲಿ ಹಾಗೂ ಇತರ ಭಾಗಗಳಲ್ಲಿ ಬಂದ್’ಗೆ ವ್ಯಾಪಕ ಬೆಂಬಲ ಸಿಕ್ಕಿದೆ.
ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ತಮ್ಮ ಸಹಕಾರವನ್ನು ನೀಡಿದರು.
ಪುತ್ತೂರು ನಗರ, ದರ್ಬೆ, ಕುಂಬ್ರ, ಕಬಕ, ಸವಣೂರು ಮುಂತಾದ ಕಡೆಗಳಲ್ಲಿ ಬಂದ್ ಭಾಗಶಃ ಯಶಸ್ವಿಯಾಗಿದೆ. ಒಟ್ಟಾರೆಯಾಗಿ ಹಿಜಾಬ್ ತೀರ್ಪಿನ ವಿರುದ್ಧವಾಗಿ ಮುಸಲ್ಮಾನರು ಒಗ್ಗಟ್ಟಿನಿಂದ ಬಂದ್ ಆಚರಿಸಿ ಸರ್ಕಾರಕ್ಕೆ ಸಂದೇಶ ರವಾನಿಸಿದರು.