ಬೆಂಗಳೂರು: ತನ್ನ ಪ್ರಿಯಕರನಲ್ಲಿ ಮದುವೆಯಾಗುವಂತೆ ಕೇಳಿದ ಯುವತಿಗೆ ಪ್ರಿಯತಮನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಗರದಲ್ಲಿ ನಡೆದಿದೆ.
ಈ ಘಟನೆಯು ಎರಡು ದಿನಗಳ ಹಿಂದೆ ತಡವಾಗಿ ಬೆಳಕಿಗೆ ಬಂದಿದ್ದು, ದಾನೇಶ್ವರಿ ಎಂಬ ಯುವತಿಯ ಮೇಲೆ ಶಿವಕುಮಾರ್ ಎಂಬ ಯುವಕ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಮದುವೆಯ ವಿಚಾರದಲ್ಲಿ ಪ್ರಸ್ತಾಪ ನಡೆದಿತ್ತು. ಈ ಸಂದರ್ಭ ಇಬ್ಬರ ನಡುವೆ ಗಲಾಟೆಯಾಗಿತ್ತು. ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ದಾನೇಶ್ವರಿ ಬಂದಿದ್ದಳು. ಈ ವೇಳೆ ಮದುವೆ ವಿಚಾರದಲ್ಲಿ ಇದ್ದ ಜಗಳ ಅತಿರೇಕಕ್ಕೇರಿತ್ತು.
ಈ ವೇಳೆ ಕೋಪಗೊಂಡ ಶಿವಕುಮಾರ್ ಬಾಟಲ್‌ನಲ್ಲಿ ಪೆಟ್ರೋಲ್ ತಂದು ದಾನೇಶ್ವರಿ ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ.ಗಾಯಾಳು ಯುವತಿಯನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾನೇಶ್ವರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಶಿವಕುಮಾರ್ ವಿರುದ್ಧ IPC 302 ಮತ್ತು SC -ST ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.