ವಿಟ್ಲ: 20 ವರ್ಷದ ಯುವಕನೊಬ್ಬ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಮುಡ್ನೂರು ಬಳಿ ನಡೆದಿದೆ.

ಯುವಕನನ್ನು ದೀಪಕ್ ಕುಮಾರ್ (20) ಎಂದು ಗುರುತಿಸಲಾಗಿದೆ.
ದೀಪಕ್ ಕುಮಾರ್ ಹತ್ತನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನು ದಿನಾಲು ಬೆಳಗ್ಗೆ ಸಾರಣೆ ಕೆಲಸಕ್ಕೆ ಹೋಗಿ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದ. ಮಾ.17 ರಂದು ಸಂಜೆ ವೇಳೆ ಮನೆಯಿಂದ ಹೊರಹೋಗಿದ್ದ.
ಮಧ್ಯರಾತ್ರಿವರೆಗೂ ಮನೆಗೆ ಬಾರದಿದ್ದುದನ್ನು ಹುಡಕಿ ಹೊರಟಾಗ ಮನೆಯ ಎದುರುಗಡೆ ಇರುವ ಗೇರು ಮರದ ಕೊಂಬೆಗೆ ಹಗ್ಗ ಸುತ್ತಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.