ಪುತ್ತೂರು: ಕುಂಬ್ರ ವರ್ತಕ ಸಂಘದ ಹಿರಿಯ ಸದಸ್ಯರಾದ ಅರಿಯಡ್ಕ ಗ್ರಾಮದ ಕೋರಿಕ್ಕಾರು ಪಯಂದೂರು ನಿವಾಸಿ ಸುಂದರ ಪೂಜಾರಿ (81) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.25 ರಂದು ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ ಇರ್ವರು ಪುತ್ರಿಯರನ್ನು ಮತ್ತು ಪುತ್ರರನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಂಬ್ರ ಪೇಟೆಯ ಸುತ್ತಮುತ್ತಾ ಇಂದು ಮಧ್ಯಾಹ್ನ ಅರ್ಧ ಗಂಟೆಯ ಕಾಲ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ವರ್ತಕರ ಸಂಘ (ರಿ) ಕುಂಬ್ರ ಪ್ರಕಟನೆಯಲ್ಲಿ ತಿಳಿಸಿದೆ.