ಮಂಗಳೂರು: ಇಲ್ಲಿನ ಹರೇಕಳ ಪಾವೂರು ಎಂಬಲ್ಲಿನ ಮಸೀದಿ ಗುರುಗಳಿಗೆ ಬುತ್ತಿ (ಉಪಹಾರ) ಕೊಂಡೊಯ್ಯುವ ಕೆಲಸ ಮಾಡುತ್ತಿದ್ದ ನಿಸಾರ್ ಎಂಬವರ ಬಹುಕಾಲದ ಸೂರು ನಿರ್ಮಿಸುವ ಕನಸನ್ನು ಮಂಗಳೂರಿನ ಪ್ರತಿಷ್ಠಿತ ಎಮ್.ಎನ್.ಜಿ. ಫೌಂಡೇಶನ್(ರಿ) ಸಂಸ್ಥೆ ನನಸಾಗಿಸಿದೆ.
ಮನೆ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು MKJM ಜುಮಾ ಮಸೀದಿಯ ಖತೀಬರಾದ ಜುನೈದ್ ಅಹ್ಸನಿಯವರು ನೆರವೇರಿಸಿದರು. ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ ಅವರು ಬುತ್ತಿ ನಿಸಾರ್ ಅವರಿಗೆ ಮನೆಯ ಕೀ ಹಸ್ತಾಂತರಿಸಿದರು. ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಸುಪುತ್ರರಾದ ಇರ್ಷಾದ್ ದಾರಿಮಿ ಅವರು ದುಆ ಆಶೀರ್ವಚನ ನೆರವೇರಿಸಿದರು. ಎಮ್.ಎನ್.ಜಿ ಫೌಂಡೇಷನ್ ಸಂಸ್ಥೆಯ ಕಾರ್ಯವೈಖರಿಯ ಕೈಪಿಡಿಯನ್ನು ಡಾ| ಅಬ್ದುಲ್ ಶಕೀಲ್, ರಶೀದ್ ಹಾಜಿ ಪಾಂಡೇಶ್ವರ, ಕಂಡತ್ ಪಲ್ಲಿ ಖತೀಬರಾದ ರಫೀಕ್ ಮದನಿ ಕಾಮಿಲ್ ಸಖಾಫಿ, ಪಿಎಫ್ಐ ಮೆಡಿಕಲ್ ಉಸ್ತುವಾರಿ ಸುರೈ ಮಂಗಳೂರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಇಸಾಕ್ ತುಂಬೆ ವಹಿಸಿದ್ದರು. ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೂಡ ವಿಶೇಷವಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಅಲ್ತಾಫ್ ಶಾಂತಿಭಾಗ್, ಅಹ್ನಾಫ್, ಯಾಕೂಬ್ ಕುತ್ತಾರ್, ಮೊಹಮ್ಮದ್ ಮೋನು, ಬದ್ರುದ್ದೀನ್ ಹರೇಕಳ, ಬಶೀರ್ ನ್ಯಾಷನಲ್, ಜಬ್ಬಾರ್ ಮಾರಿಪಲ್ಲ, ಮುಸ್ತಫ ಪಿ.ಬಿ. ತಲ್ಹತ್ ಫೈಸಲ್ ನಗರ, ಅಝ್ಗರ್ ಮುಡಿಪು, ಅಲ್ತಾಫ್ ಬೋಲಾರ್, ಸವಾದ್ ತಲಪಾಡಿ, ಬದ್ರುದ್ದೀನ್ ಪಾನೇಲ, ಹಮೀದ್ ಕಾಟಿಪಲ್ಲ, A1 ರಿಯಾಝ್, ಇನ್ನಿತರ ಗಣ್ಯ ಅತಿಥಿಗಳು ಭಾಗವಹಿಸಿದ್ದರು. ಎಮ್.ಎನ್.ಜಿ. ಫೌಂಡೇಶನ್(ರಿ) ಸಂಸ್ಥೆಯ ಸಂಸ್ಥಾಪಕರಾದ ಇಲ್ಯಾಸ್ ಮಂಗಳೂರು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯನಿರ್ವಾಹಕರು, ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತವಿಕ ಭಾಷಣ ರಫೀಕ್ ಪರ್ಲಿಯಾ ಮಾಡಿದರು. ನಕಾಶ್ ಬಾಂಬಿಲ ಸ್ವಾಗತಿಸಿದರು, ಶಿಹಾಬ್ ತಂಙಳ್ ಧನ್ಯವಾದಗೈದರು. ಖಲಂದರ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.