';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ, ರಾಜ್ಯ ಬಿಜೆಪಿ ಸರಕಾರದ ಅರಾಜಕತೆಯ ವಿರುದ್ಧ, ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನಾ ಸಭೆಯು ಇಂದು ಸಂಜೆ ನಡೆಯಿತು.
ದರ್ಬೆ ವೃತ್ತದಿಂದ – ಎಸಿ ಕಛೇರಿವರೆಗೆ ಕಾಲ್ನಡಿಗೆ ಜಾಥಾ ಮೂಲಕ ಆಗಮಿಸಿ ನಂತರ ಅಮರ್ ಜವಾನ್ ಸ್ಮಾರಕ ಬಳಿ ಪ್ರತಿಭಟನಾ ಸಭೆ ನಡೆಯಿತು. SDPI ನಾಯಕರು ಬಿಜೆಪಿ ಸರಕಾರ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ಭಾಷನ ಮಾಡುತ್ತಿದ್ದಂತೆ, ಪೊಲೀಸ್ ಮತ್ತು ಕಾರ್ಕಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಯಲ್ಲಿ ಅನುಮತಿ ರಹಿತ ಧ್ವನಿವರ್ಧಕ ಬಳಸಿದ ಕಾರಣ ಧ್ವನಿವರ್ಧಕ ಸಹಿತ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ SDPI ಕಾರ್ಯಕರ್ತರು, ಸ್ಥಳದಲ್ಲೇ ಘೋಷನೆ ಕೂಗಿದ್ದಾರೆ.
ಇದೀಗ ಪುತ್ತೂರು ಪೊಲೀಸರು ಪ್ರತಿಭಟನೆಯ ನಡುವೆಯೇ ಧ್ವನಿವರ್ಧಕದ ವಾಹನ ವಶಪಡಿಸಿಕೊಂಡಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.