ಮಂಗಳೂರು: ಸಾರ್ವಜನಿಕರಿದ್ದ ಸ್ಥಳದಲ್ಲಿ ಯಾವುದೇ ಮುಲಾಜಿಲ್ಲದೆ ರಾಜಾರೋಷವಾಗಿ ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರಾಕ್ ಬಳಿ ಬಂಧಿಸಿದ ಘಟನೆ ನಿನ್ನೆ ನಡೆದಿದೆ.
ಬಂಧಿತ ಆರೋಪಿಯು ಕೈಕಂಬ ಸಮೀಪದ ಸೂರಲ್ಪಾಡಿಯ ನಿವಾಸಿ ಸಫ್ವಾನ್ (19) ಎಂದು ತಿಳಿದು ಬಂದಿದೆ.
ಆರೋಪಿಯು ರೈಲ್ವೆ ಟ್ರಾಕ್ ಬಳಿ ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದಂತೆ ವರ್ತಿಸುತ್ತಿದ್ದ ಹಿನ್ನೆಲೆ ಎಸ್‌ಐ ಉಮೇಶ್ ಕುಮಾರ್ ಹಾಗೂ ಹೆಚ್.ಸಿ ಚಂದ್ರಹಾಸರವರು ಆತನನ್ನು ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಆತನ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.