ನವದೆಹಲಿ: ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಗೂಳಿಯೊಂದು ದಾಳಿ ನಡೆಸಿರುವ ಘಟನೆ ನವದೆಹಲಿಯ ದಯಾಲ್‌ಪುರದ ಶೇರ್‌ಪುರ್ ಚೌಕ್‌ನಲ್ಲಿ ನಡೆದಿದೆ.
ಗೂಳಿಯು ವೃತ್ತಿನಿರತ ಕಾನ್‌ಸ್ಟೇಬಲ್ ಜ್ಞಾನ್ ಸಿಂಗ್‌ನನ್ನು ಹಿಂದಿನಿಂದ ಗುದ್ದಿ ಗಾಳಿಯಲ್ಲಿ ಮೇಲಕ್ಕೆ ಹಾರಿಸಿದ್ದು, ಅವರು ನೆಲಕ್ಕೆ ಬಿದ್ದ ಬಳಿಕ ಕರ್ತವ್ಯದಲ್ಲಿದ್ದ ಇತರ ಪೊಲೀಸರು ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಘಟನೆಯ ಕುರಿತು ಭಾವ್ ನಗರ ಮೇಯರ್ ಕೀರ್ತಿ ದಾನಿಧರಿಯಾ ಮಾತನಾಡಿ, ‘ಕಳೆದ ವರ್ಷ ಗುಜರಾತಿನ ಭಾವನಗರದಲ್ಲಿ ಬಿಡಾಡಿ ಗೂಳಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ್ದು, ಬೀದಿಗಿಳಿದ ಹೋರಿಗಳು ಮತ್ತು ಹಸುಗಳನ್ನು ರಸ್ತೆಯಿಂದ ಹೊರದಬ್ಬಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.