dtvkannada

ಪುತ್ತೂರು: ಯಾವುದೇ ಅನುಮತಿ ಪಡೆಯದೆ ಪಿಕಪ್ ವಾಹನದಲ್ಲಿ ಧ್ವನಿವರ್ಧಕವನ್ನು ಬಳಸಿ ಪ್ರತಿಭಟನಾ ಕಾರ್ಯಕ್ರಮ ನಡೆಸಿದ ಎಸ್‌ಡಿಪಿಐ ಪಕ್ಷದ ಮುಖಂಡರೊಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.1ರಂದು ಎಸ್‌ಡಿಪಿಐ ಪಕ್ಷದ ವತಿಯಿಂದ ಬಿಜೆಪಿ ಸರಕಾರದ ವಿರುದ್ಧ ದರ್ಬೆಯಿಂದ ತಾಲೂಕು ಆಡಳಿತ ಸೌಧದ ತನಕ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆದಿತ್ತು. ಈ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆಗೆ ಪಿಕಪ್ ವಾಹನದಲ್ಲಿ ಧ್ವನಿವರ್ಧಕವನ್ನು ಬಳಸಲಾಗಿತ್ತು. ಆದರೆ ಧ್ವನಿವರ್ಧಕಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದ ಆರೋಪದಲ್ಲಿ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಯುವ ಸಂದರ್ಭ ಪೊಲೀಸರು ಧ್ವನಿವರ್ಧಕವನ್ನು ನಿಲ್ಲಿಸುವಂತೆ ಸೂಚಿಸಿದರು.

ಈ ವೇಳೆ ಪೊಲೀಸ್ ಮತ್ತು ಎಸ್‌ಡಿಪಿಐ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಪೊಲೀಸರು ಎಸ್‌ಡಿಪಿಐ ಪಕ್ಷದ ಧ್ವನಿವರ್ಧಕವನ್ನು ವಶಕ್ಕೆ ಪಡೆದು ಕೊಂಡಿದ್ದರು. ಇದೀಗ ಪೊಲೀಸರು ಕಾರ್ಯಕ್ರಮದ ಆಯೋಜಕ ಅಶ್ರಫ್ ಬಾವು ಅವರ ವಿರುದ್ಧ ಸೆಕ್ಷನ್ 109 ಅನ್ವಯ ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!