ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್‌ರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಿಜೆಪಿ ನಾಯಕ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಲು ಕಾರಣ ಇನ್ನೂ ತಿಳಿಸಿಲ್ಲ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ರದ್ದುಪಡಿಸಿದ ಅಧಿಸೂಚನೆ ಪತ್ರವನ್ನು ರಿಜಿಷ್ಟಾರ್ ಆಫೀಸಿಗೆ ಕಳುಹಿಸುವ ಮೂಲಕ ಈ ಆದೇಶ ಹೊರಡಿಸಿದ್ದಾರೆ.