dtvkannada

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ ನಡೆದಿದ್ದು, ಇದು ಲವ್ ಜಿಹಾದ್ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಕಮರಿಪೇಟೆ ನಿವಾಸಿ ಸ್ನೇಹಾಳನ್ನ ಇಬ್ರಾಹಿಂ ಪ್ರೀತಿಸಿದ್ದ. ಗದಗನಲ್ಲಿ ಈ ಜೋಡಿ ರಿಜಿಸ್ಟ್ರಾರ್ ಮದುವೆ ಕೂಡಾ ಆಗಿದೆ. ಯುವತಿಯ ತಲೆಕೆಡಿಸಿದ್ದಾರೆಂದು ಆರೋಪಿಸಿರುವ ಪೋಷಕರು, ಲವ್ ಜಿಹಾದ್ ಮಾಡಿ ಹುಡುಗಿಯನ್ನ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇಬ್ರಾಹಿಂ ಹಿಂದೂ ಹುಡುಗ ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಹುಡುಗಿಯನ್ನ ಎರಡನೇ ತಾರೀಖಿನಂದು ಕರೆದುಕೊಂಡು ಹೋಗಿ ಗದಗನಲ್ಲಿ ರಿಜಿಸ್ಟ್ರಾರ್ ಮದುವೆಯಾಗಿದ್ದಾನೆ. ಇಬ್ರಾಹಿಂ ಹುಡುಗಿ ಸಹೋದರನಿಂದ ಪರಿಚಯವಾಗಿದ್ದ. ಇನ್ನು ನಿನ್ನೆ ಇಡೀ ದಿನ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಕಲಿ ದಾಖಲಾತಿ ಸೃಷ್ಟಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಫೆಬ್ರವರಿ 11 ರಂದು ಸ್ನೇಹಾ ಮನೆಯಲ್ಲೆ ಇದ್ದರೂ ಮದುವೆಯಾಗಿದ್ದಾಗಿ ದಾಖಲೆ ಇದೆ. ಹೀಗಾಗೇ ಲವ್ ಜಿಹಾದ್ ಪೋಷಕರು ಆರೋಪ ಮಾಡಿದ್ದಾರೆ. ಹುಡುಗಿಯನ್ನ ಪೊಲೀಸರು ಕರೆತರದೆ ಇದ್ದರೆ ಪ್ರತಿಭಟನೆ ಉಗ್ರ ಸ್ವರೂಪ ತಾಳಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಪೊಲೀಸರಿಗೆ ನಾಳೆ ಮಧ್ಯಾಹ್ನ 12 ರವೆಗೆ ಗಡುವು ನೀಡಿದ ಪ್ರಮೋದ್, ನಾಳೆ ಗಲಾಟೆಯಾದರೆ ಸರ್ಕಾರವೇ ಹೊಣೆ ಎಂದಿದ್ದಾರೆ.

ಸ್ನೇಹಾ ಎಪ್ರಿಲ್ 2 ರಿಂದ ಕಾಣಿಸ್ತಾ ಇರಲಿಲ್ಲ. ಆವತ್ತೆ ದೂರು ನೀಡಿದ್ದರೂ ಪೊಲೀಸರು ಉದಾಸೀನ ಮಾಡಿದ್ದಾರೆ. ದೂರು ನೀಡಿ ಐದು ದಿನ ಕಳೆದರೂ ಯುವತಿಯನ್ನು ಹುಡುಕಿಲ್ಲ ಅಂತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಹೇಳಿಕೆ ರಿಲೀಸ್:
ಮದುವೆಯಾದ ಯುವತಿ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾಳೆ. ನನ್ನನ್ನು ಯಾರೂ ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ನಾನು ಒಪ್ಪಿಕೊಂಡು ಪ್ರೀತಿಯಿಂದ ಹೋಗಿದ್ದೇನೆ ಎಂದು ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!