dtvkannada

ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ ಮತ್ತು ಲಾರಿ ಢಿಕ್ಕಿಯಾದ ಪರಿಣಾಮ ಸವಾರ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ.

ಮೃತ ಸವಾರನನ್ನು ಉಳ್ಳಾಲ ಕುಂಪಲದ ನಿವಾಸಿ ರವಿಕುಮಾರ್‌(62) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಏಕಮುಖವಾಗಿಯೇ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿರುವ ದ್ವಿಚಕ್ರ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸವಾರ ಸಾವನ್ನಪ್ಪಿದ್ದಾನೆ. ಢಿಕ್ಕಿ ಹೊಡೆದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಎಕ್ಕೂರು ಜಂಕ್ಷನ್‌ನಲ್ಲಿದ್ದ ಸ್ಥಳೀಯರು, ಸಂಘಟನೆಗಳ ನಾಯಕರು ಆಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ರಕ್ತದೋಕುಳಿಯನ್ನು ನೀರು ಹಾಕಿ ಸ್ವಚ್ಛಗೊಳಿಸಿದ್ದಾರೆ.

ನಗರ ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ರಸ್ತೆ ದುರಂತದಿಂದಾಗಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸಂಚಾರಿ ಪೊಲೀಸರು ಆಗಮಿಸಿ ವಾಹನ ತೆರವುಗೊಳಿಸಿದರು.

By dtv

Leave a Reply

Your email address will not be published. Required fields are marked *

error: Content is protected !!