dtvkannada

ಸುಳ್ಯ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅವೈಜ್ಞಾನಿಕ ನೀತಿಯಿಂದ ಇಂದನ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆಯೇರಿಕೆ ಯಿಂದ ಸಮಾಜದ ಎಲ್ಲಾ ವರ್ಗದ ಜನರು ಕಂಗೆಟ್ಟಿದ್ದು ಬದುಕು ದುಬಾರಿ ಆಗುತ್ತಿದೆ, ಕೊರೋನಾ ನಂತರ ಆರ್ಥಿಕ ಹೊಡೆತಕ್ಕೆ ಜನಸಾಮಾನ್ಯರು ಬಲಿಯಾಗಿದ್ದು ಇದೀಗ ದಿನನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ.

ಇದನ್ನು ನಿಯಂತ್ರಿಸಬೇಕಾದ ಸರಕಾರಗಳು ನೈಜ ಘಟನೆಯನ್ನು ಮರೆಮಾಚಿ ಕೋಮು ದ್ರುವೀಕರಣದ ಮೂಲಕ ಜನರನ್ನು ಧರ್ಮ, ಜಾತಿಯ ಹೆಸರಲ್ಲಿ ಪ್ರಚೋದಿಸಿ ಅನಗತ್ಯ ವಿಚಾರಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.

ಇದರ ವಿರುದ್ಧ SDPI ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಅದರ ಭಾಗವಾಗಿ ಬೆಳ್ಳಾರೆಯಲ್ಲಿ ಎಪ್ರಿಲ್ 13 ಬೆಳಿಗ್ಗೆ 11 ಗಂಟೆಗೆ ಬೆಳ್ಳಾರೆ ಕೆಳಗಿನ ಪೇಟೆಯಿಂದ ಬಸ್ಸು ನಿಲ್ದಾಣದ ವರೆಗೆ ಕಾಲ್ನಾಡಿಗೆ ಜಾಥ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ.

ಈ ಪ್ರತಿಭಟನೆಯಲ್ಲಿ ಸಂವಿಧಾನ ಪ್ರೇಮಿಗಳಾದ ಎಲ್ಲಾ ನಾಗರಿಕರು, ಅಭಿಮಾನಿಗಳು ಬಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ SDPI ಸುಳ್ಯ ಅಸೆಂಬ್ಲಿ ಜೊತೆ ಕಾರ್ಯದರ್ಶಿ ಉವೈಸ್ ಸಂಪಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!