ಮಡಂತ್ಯಾರ್(ಎ15): ರಾಮನವಮಿಯ ಶೋಭೆಯಾತ್ರೆಯ ನೆಪದಲ್ಲಿ ಸಂಘಪರಿವಾರ ಮುಸ್ಲಿಮರನ್ನು ಗುರಿಯಾಗಿಸಿ ದೇಶದೆಲ್ಲೆಡೆ ನಡೆಸಿದ ಹಿಂಸಾಚಾರ ಮತ್ತು ಗಲಭೆಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ವಲಯ ವತಿಯಿಂದ ಮಡಂತ್ಯಾರ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್ಐ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಪುಂಜಾಲಕಟ್ಟೆ ಯವರು ದೇಶದಲ್ಲಿ ರಾಮನವಮಿಯ ನೆಪವಾಗಿಟ್ಟುಕೊಂಡು ಜಾಥಗಳನ್ನು ಮಾಡಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಮಸೀದಿಗೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿರುವ ಸಂಘಪರಿವಾರದ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು,
ಹಾಗೂ ಖುರಾನ್ ನ ಆಯತ್ ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸಿ.ಟಿ ರವಿ ರವರು ಈ ತಕ್ಷಣ ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳಬೇಕು ಅದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸಂಘಪರಿವಾರ ಪ್ರೇರಿತ ಗೂಂಡಾಗಳು ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸುದಾದರೆ ಅದನ್ನು ಪ್ರತಿರೋಧಿಸಲು ಪಿಎಫ್ಐ ಸಜ್ಜಾಗಿದೆ ಎಂದು ಎಚ್ಚರಿಕೆಯನ್ನು ನೀಡಿದರು.
ಪ್ರಸಕ್ತ ಗಲಭೆಯಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿದ್ದು, ನೂರಾರು ಮನೆಗಳನ್ನು ಧ್ವಂಸಗೈಯ್ಯಲಾಗಿದೆ. ಗಲಭೆಯ ಹಿಂದಿರುವ ಕಾಣದ ಕೈಗಳನ್ನು ಬೆಳಕಿಗೆ ತಂದು ಕಾನೂನು ಕ್ರಮ ಜರುಗಿಸಬೇಕು. ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಪಿಎಫ್ಐ ಜಿಲ್ಲಾ ಅಧ್ಯಕ್ಷರಾದ ಮುಸ್ತಫಾ ಗುರುವಾಯನಕೆರೆ, ಪಿಎಫ್ಐ ಮಡಂತ್ಯಾರ್ ಡಿವಿಜನ್ ಅಧ್ಯಕ್ಷರಾದ ಬಿ.ಎಂ ರಝಕ್,ಎಸ್ಡಿಪಿಐ ಕುಕ್ಕಲ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಪುಂಜಾಲಕಟ್ಟೆ
ಉಪಸ್ಥಿತರಿದ್ದರು.