ದೆಹಲಿಯಲ್ಲಿ ನಿನ್ನೆ ಈ ಘಟನೆ ಆದ ನಂತರ ಹಲವಾರು ಜನರು ಕವಿತೆ ಬರೆಯುವವರು ಎಲ್ಲಿ?, ಕತೆ ಬರೆಯುವವರು ಎಲ್ಲಿ?, ಈಗ ಕರುಣೆ ಬರುವುದಿಲ್ಲವೇ? ಇದಕ್ಕೆ ಅವರ ಮನಸ್ಸು ಕರಗುವುದಿಲ್ಲವೇ? ಎಂದೆಲ್ಲಾ ಪ್ರಶ್ನಿಸುತ್ತಾ, ‘ಪ್ರತಿರೋಧ ತಪ್ಪಲ್ಲ’ ಎನ್ನುತ್ತಾ ಏನೇನೋ ಕತೆ ಬರಿತಾ ಇದ್ದಾರೆ.
ಮೊದಲನೆಯದಾಗಿ ನೀವು ಬಯಸಿದವರು ಈ ಘಟನೆಯನ್ನು ಖಂಡಿಸಿ ಬರೆಯಲಿಲ್ಲ ಎಂಬ ಕಾರಣಕ್ಕೆ ಅವರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಅರ್ಥವಲ್ಲ. ಮೌನವಾಗಿ ಇರುವುದು ಕೂಡಾ ಒಳ್ಳೆಯ ಲಕ್ಷಣವಲ್ಲ, ಹೀಗೆಲ್ಲ ಆಗುತ್ತಾ ಇರಬೇಕಾದರೆ ಜೀವಂತ ಇರುವವರು ಬರೆಯಬೇಕು ಎಂಬುವುದು ನಿಜವೇ ಆಗಿದೆ. ಆದರೆ ಅವರೇ ಇದನ್ನು ಖಂಡಿಸಿ ಬರೆಯಬೇಕು ಎಂದು ನೀವು ನಿರೀಕ್ಷೆ ಮಾಡುವುದು ತಪ್ಪು. ಯಾಕೆಂದರೆ ಇಲ್ಲಿ ಸಾವಿರಾರು ತಲೆಬಿಸಿಗಳು ಇರುತ್ತವೆ. ಪ್ರತಿಯೊಬ್ಬರಿಗೂ ಅವರ ಸಮಸ್ಯೆಗಳು ಕೂಡಾ ಅತ್ಯಂತ ದೊಡ್ಡದೇ ಆಗಿರುತ್ತೆ. ಅವರು ಬರೆಯಲಿಲ್ಲ, ಇವರು ಬರೆಯಲಿಲ್ಲ ಎಂದು ಕೊರಗುತ್ತಾ ಕೂರುವುದುಕ್ಕಿಂತ ನೀವೇ ಬರೆದು ಪ್ರತಿಭಟಿಸಬಹುದು.
ಮತ್ತೊಂದು ವಿಷಯ, ಪ್ರತಿರೋಧ ತಪ್ಪಲ್ಲ ಎಂದು ಹೇಳುತ್ತಾ ಅಪರಾಧ ಮಾಡಲು ಜನರ ಮನಸ್ಸನ್ನು ತಯಾರು ಮಾಡುವುದು ತಪ್ಪು.
ಹೌದು ಪ್ರತಿರೋಧ ತಪ್ಪಲ್ಲ, ಪ್ರತಿರೋಧ ಯಾವುದು? ನಿನ್ನೆ ಕಾಮ್ರೇಡ್ ಬೃಂದಾ ಕಾರಟ್, ಕಾಮ್ರೇಡ್ ಹನಾನ್ ಮುಲ್ಲಾ ಸೇರಿದ ಸಂಗಾತಿಗಳು ಬುಲ್ಡೋಜರ್ ಮುಂದೆ ಬಂದು ನಿಂತು, ಇದಕ್ಕೆ ನಾವು ಬಿಡಲ್ಲ ಎಂದರಲ್ಲ ಅ ಪ್ರತಿರೋಧ. ಅದು ತಪ್ಪಲ್ಲ. ಜನರಿಗಾಗಿ ಬೀದಿಗಿಳಿದಿದ್ದು, ಪ್ರಭುತ್ವದೊಂದಿಗೆ ಕಾದಾಡಿದ್ದು ಪ್ರತಿರೋಧ. ಅದು ಬಿಟ್ಟು ಬುಲ್ಡೋಜರ್ ತಂದ ಅದರ ಡ್ರೈವರ್ ಮನೆಯನ್ನು ಹೋಗಿ ಒಡೆಯುವುದು ಪ್ರತಿರೋಧ ಅಲ್ಲ. ಅದು ಪ್ರತಿಕಾರ ಮತ್ತು ಅಪರಾಧ.
ನಿಮ್ಮವರನ್ನು ಕೊಂದಿದ್ದಾರೆ ಎಂದು ಯಾರೋ ಮತ್ತೊಬ್ಬರನ್ನು ಕೊಲ್ಲುವುದು, ಅದಕ್ಕೆ ಸಂಭ್ರಮ ಪಡುವುದು, ಅದರ ನಂತರ ಪ್ರತಿರೋಧ ಎನ್ನುವುದು ತಪ್ಪು. ಅದು ಪ್ರತಿಕಾರ ಮತ್ತು ಅಪರಾಧ. ಅರ್ಥ ಮಾಡ್ಕೊಳ್ಳಿ…
ಅಷ್ಟೇ.
-ಹುಸೇನ್